ಬೆಳಗಾವಿ ಉದ್ಯಮಿ ಕೊಲೆ ಕೇಸ್ ನ ಪ್ರಮುಖ ಆರೋಪಿ ಮೇಲೆ ಪೊಲೀಸ್ ಫೈರಿಂಗ್

1 min read

ಬೆಳಗಾವಿ :  ನಸುಕಿನ ಜಾವ ಬೆಳಗಾವಿಯಲ್ಲಿ ಪೊಲೀಸರ ಗುಂಡಿನ ಸದ್ದು ಮೊಳಗಿದೆ.  ತಲೆಮರೆಸಿಕೊಂಡಿದ್ದ ಬೆಳಗಾವಿ ಉದ್ಯಮಿ ಕೊಲೆ ಕೇಸ್ ನ ಪ್ರಮುಖ ಆರೋಪಿ ಮೇಲೆ ಪೊಲೀಸ್ ಫೈರಿಂಗ್ ಮಾಡಿದ್ದಾರೆ.. ಆರೋಪಿ ವಿಶಾಲ ಸಿಂಗ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ..

ಬೆಳಗಾವಿಯ ವೀರಭದ್ರೇಶ್ವರ ನಗರದ ಕೊಯ್ಲಾ ಹೋಟೆಲ್ ಬಳಿ ಫೈರಿಂಗ್ ನಡೆದಿದೆ.. ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ 3 ಗಂಟೆಗೆ ಆರೋಪಿ ಬಂಧನಕ್ಕೆ ತೆರಳಿದ್ದ ಎಸಿಪಿ ಬರಮನಿ & ಟಿಂ ಕಾರ್ಯಾಚರಣೆಯಲ್ಲಿ ಫೈರಿಂಗ್ ನಡೆದಿದೆ..

ಈ ವೇಳೆ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಲು ಆರೋಪಿ  ಯತ್ನಿಸಿದ್ದಾನೆ.  ಬೆಳಗಾವಿ ಕ್ರೈಂ ಎಸಿಪಿ ನಾರಾಯಣ ಬರಮಣಿ ಅವರಿಂದ ಆರೋಪಿ ಎಡಗಾಲಿಗೆ ಎರಡು ಸುತ್ತು ಫೈರಿಂಗ್ ಮಾಡಲಾಗಿದೆ..

ಬೆಳಗಾವಿ ಉದ್ಯಮಿ ರಾಜು ದೊಡ್ಡಣ್ಣವರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಚೌಹಾಣ್ ಮೇಲೆ ಫೈರಿಂಗ್ ಮಾಡಿ ಆರೋಪಿಯನ್ನ ಬಂಧಿಸಿ, ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ..

ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಈತ.. ಬೆಳಗಾವಿಯ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd