Belgaum | ದರ್ಗಾದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ
ಬೆಳಗಾವಿ : ಬೈಲಹೊಂಗಲ ಪಟ್ಟಣ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ಪಟ್ಟಣದ ಕಂಠಿಗಲ್ಲಿಯ ಆಲಕಟ್ಟಿಯ ಫಕ್ಕೀರಸ್ವಾಮಿ ದರ್ಗಾದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡಲಾಗಿದೆ.
ಹಿಂದೂ-ಮುಸ್ಲಿಂ ಧರ್ಮಿಯರಿಂದ ನಿತ್ಯ ವಿಘ್ನನಿವಾರಕನ ಪೂಜೆ ನೆರವೇರುತ್ತಿದೆ.
ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಬೈಲಹೊಂಗಲದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಪ್ರತಿ ವರ್ಷ ಎಲ್ಲ ಹಬ್ಬವನ್ನು ಒಂದಾಗಿ ಆಚರಣೆ ಮಾಡಲಾಗುತ್ತದೆ.
ಹಿಂದೂಗಳು ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯದ ಹಜ್ಜೆ ಇಡುತ್ತಿದ್ದರೇ, ಮುಸ್ಲಿಮರು ದರ್ಗಾದೊಳಗೆ ಗಣೇಶನ ಮೂರ್ತಿ ಕೂರಿಸಿ ಪೂಜಿಸುತ್ತಾರೆ.
ಬಳಿಕ ಮೂರ್ತಿ ವಿಸರ್ಜನೆ ದಿನವೂ ಕೂಡ ಒಟ್ಟಿಗೆ ಮೆರವಣಿಗೆ ಮೂಲಕ ತೆರಳುತ್ತಾರೆ.