Belgaum | ಬೆಳಗಾವಿಯಲ್ಲಿ ಮರಾಠಿ ಸಿನಿಮಾ ರಿಲೀಸ್ ಗೆ ವಿರೋಧ
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಮರಾಠಿ ಸಿನಿಮಾ ಬಾಯ್ಸ್ 03 ಚಿತ್ರ ಬಿಡುಗಡೆ ವಿರೋಧ ವ್ಯಕ್ತವಾಗಿದೆ.
ಸಿನಿಮಾದಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ತೋರಿಸಲಾಗಿದೆ.
“ಮರಾಠಿ ಭಾಷೆಯನ್ನ ಬೆಳಗಾವಿಯಲ್ಲಿ ಮಾತನಾಡದಿದ್ದರೆ ಮತ್ತೆಲ್ಲಿ ಮಾತನಾಬೇಕು” ಎಂಬ ಡೈಲಾಗ್ ಕೂಡ ಇದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಈ ಸಿನಿಮಾದ ರಿಲೀಸ್ ಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದಿಂದ ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ ಅವರಿಗೆ ಮನವಿ ಸಲ್ಲಿಸಲಾಗಿದೆ.
ಬಾಯ್ಸ್ 03 ಸಿನಿಮಾ ಇಂದು ಬೆಳಗಾವಿ ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. Belgaum Opposition to Marathi movie release saaksha tv