ಬಳ್ಳಾರಿ : ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
1 min read
ಬಳ್ಳಾರಿ Bellary : ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
ವಿಜಯನಗರ : ಅಟ್ಟಾಡಿಸಿಕೊಂಡು ಹೋಗಿ ಯುವಕನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಮೈಕಲ್ ಜಾನ್ ಮೃತ ಯುವಕನಾಗಿದ್ದು, ಹೊಸಪೇಟೆ ನಿವಾಸಿ ಎಂದು ತಿಳಿದುಬಂದಿದೆ. ಮೈಕಲ್ ಜಾನ್ ಕೇಬಲ್ ಆಪರೇಟರಾಗಿ ಕೆಲಸ ಮಾಡುತ್ತಿದ್ದನಂತೆ.
ಕೊಲೆಗೆ ಹಳೆ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಹೊಸಪೇಟೆಯ ಡಿಬಿ ಡ್ಯಾಂ ಬಳಿಯ ಫ್ಲೈಓವರ್ ಕೆಳಗಡೆ ಮೈಕಲ್ ಜಾನ್ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಶ್ವಾನದಳ, ಟಿಬಿ ಡ್ಯಾಂ ಠಾಣಾ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇನ್ನ ಘಟನೆಯ ಸಂಬಂಧ ಡಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
