ಆಕ್ಷಿಜನ್ ಪ್ಲಾಂಟ್ ನಲ್ಲಿ ಏಕಾಏಕಿ ಸ್ಪೋಟ
ಮೂವರಿಗೆ ಗಾಯ , ಒಬ್ಬರ ಸ್ಥಿತಿ ಚಿಂತಾಜನಕ
ಬಳ್ಳಾರಿಯ ಕುಡತಿನಿಯಲ್ಲಿ ಘಟನೆ
ಬಿಟಿಪಿಎಸ್ ಆಕ್ಸಿಜನ್ ಪ್ಲ್ಯಾಂಟ್ನಲ್ಲಿ ಸ್ಪೋಟ
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಗಳುಗಳು ಬೆಂಗಳೂರಿಗೆ ರವಾನೆ
ಆಕ್ಷಿಜನ್ ಪ್ಲಾಂಟ್ ನಲ್ಲಿ ಏಕಾಏಕಿ ಸಂಭಾವಿಸಿದ ಸ್ಪೋಟದಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್ ಆಕ್ಸಿಜನ್ ಪ್ಲ್ಯಾಂಟ್ನಲ್ಲಿ ನಡೆದಿದೆ..
ಬಳ್ಳಾರಿ : ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.. ಆದ್ರೆ ಓರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದೆ.. ಮೂವರ ಪೈಕಿ ಇಬ್ಬರು ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನೂ ಸ್ಫೋಟಕ್ಕೆ ಕಾರಣೆವೇನೆಂಬುದು ನಿಖರವಾಗಿ ತಿಳಿದುಬಂದಿಲ್ಲ.. ಘಟನಾ ಸ್ಥಳಕ್ಕೆ ಬಿಟಿಪಿಎಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಿದೆ.. ಕುಡತಿನಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.