ಬೆಂಗಳೂರು : ಪರೀಕ್ಷೆ ಬರೆಯುವಾಗ ಕಾಪಿ ಮಾಡುತ್ತಿದ್ದಳೆಂದು ಡಿಬಾರ್ ಮಾಡಿದಕ್ಕೆ ಮನನೊಂದು ವಿದ್ಯಾರ್ಥಿನಿ 19 ವರ್ಷದ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋರಮಂಗಲದ ಬಳಿ ನಡೆದಿದೆ..
19 ವರ್ಷದ ಭವ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ದೊಮ್ಮಲೂರು ಬ್ರಿಡ್ಜ್ ಬಳಿಯ ಲೇಡಿಸಿ ಪಿಜಿ ಕಟ್ಟಡವೊಂದರ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡ್ತಿದ್ದ ಭವ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನಿನ್ನೆ ನಡೆದ ಎಕ್ಸಾಮ್ ನಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಡಿಬಾರ್ ಮಾಡಲಾಗಿತ್ತು. ಇದ್ರಿಂದ ಮನನೊಂದ ಭವ್ಯ ಸೋದರಿ ದಿವ್ಯಾಗೆ ಕರೆ ಮಾಡಿ ನೋವು ಹಂಚಿಕೊಂಡಿದ್ದಳಂತೆ. ನಾನು ದೂರ ಹೋಗ್ತಿದ್ದೇನೆ ಹುಡುಕುವ ಪ್ರಯತ್ನ ಮಾಡಬೇಡಿ ಎಂದಿದ್ದಾಳೆ.. ಕೂಡಲೆ ವಿಚಾರವನ್ನ ತನ್ನ ದಿವ್ಯಾ ತಂದೆಗೆ ಕರೆ ಮಾಡಿ ತಿಳಿಸಿದ್ದಾಳೆ… ತಂದೆ ತಕ್ಷಣ ಹಹೊರಟಿದದ್ದಾರೆ… ಆದ್ರೆ ಅವರು ಬರುವಷ್ಟರಲ್ಲಿ ಭವ್ಯ ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.. ಈ ಸಂಬಂಧ ಜೀವನ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.