ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತೆ ಹತ್ತು ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇವತ್ತು ಒಂದೇ ದಿನ ನಗರದಲ್ಲಿ 10,231 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ ನಗರದ ಹೊರವಲಯದ 1,165 ಪ್ರಕರಣಗಳನ್ನೂ ಸೇರಿಸಿ ಒಟ್ಟು 11,396 ಜನರಿಗೆ ಸೋಂಕು ತಗುಲಿದೆ. ಮುಖ್ಯವಾಗಿ ಬೆಂಗಳೂರು ದಕ್ಷಿಣ ವಲಯದಲ್ಲಿ 2,117 ಜನರಲ್ಲಿ ಸೋಂಕು ದೃಢಪಟ್ಟಿದೆ.
ಆರ್ ಆರ್ ನಗರದಲ್ಲಿ 757, ಪಶ್ಚಿಮ ವಿಭಾಗದಲ್ಲಿ 1,479, ಬೊಮ್ಮನಹಳ್ಳಿಯಲ್ಲಿ 1,124, ದಾಸರಹಳ್ಳಿ 318, ಪೂರ್ವ ವಲಯ 1,692, ಮಹದೇವಪುರದಲ್ಲಿ 1,405, ಯಲಹಂಕ 570, ಅನೇಕಲ್ 302, ಪೂರ್ವ ತಾಲೂಕು 110, ಉತ್ತರ ತಾಲೂಕು 147, ದಕ್ಷಿಣ ತಾಲೂಕಿನಲ್ಲಿ 210 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.








