ಹಾಸನ ಎಸ್ ಪಿ ಆರ್.ಶ್ರೀನಿವಾಸ್ ಗೌಡರಿಗೆ ಕೊರೊನಾ ಪಾಸಿಟಿವ್
ಹಾಸನ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಜಿಲ್ಲಾ ಎಸ್ ಪಿ ಆರ್.ಶ್ರೀನಿವಾಸ್ ಗೌಡರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸದ್ಯ ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಶನ್ ನಲ್ಲಿದ್ದಾರೆ.
ಶ್ರೀನಿವಾಸ್ ಅವರಿಗೆ ಗುರುವಾರ ಸಂಜೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಕೊರೊನಾ ಟೆಸ್ಟ್ ನಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಇಲ್ಲಿಯ ತನಕ ಸುಮಾರು 31,379 ಪ್ರಕರಣಗಳು ಪತ್ತೆಯಾಗಿದ್ದು, 29,524 ಮಂದಿ ಗುಣಮುಖರಾಗಿದ್ದಾರೆ. ಒಂದು ವರ್ಷದಲ್ಲಿ 487 ಮಂದಿ ಸಾವನ್ನಪ್ಪಿದ್ದಾರೆ.