ಐಪಿಎಲ್ 2021 : ಮುಂಬೈಗೆ ಶಾಕ್ ನೀಡುತ್ತಾ ಹೈದರಾಬಾದ್

1 min read
mi

ಐಪಿಎಲ್ ದಂಗಲ್ ನಲ್ಲಿ ಇವತ್ತು ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನಾಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್ ಒಂದು ಮ್ಯಾಚ್ ಸೋತು, ಇನ್ನೊಂದು ಮ್ಯಾಚ್ ಗೆದ್ದುಕೊಂಡಿದೆ. ಇತ್ತ ಆಡಿದ ಎರಡೂ ಪಂದ್ಯಗಳನ್ನ ಸೋತಿರುವ ಹೈದರಾಬಾದ್ ಈ ಪಂದ್ಯದಲ್ಲಿ ಗೆದ್ದು ಖಾತೆ ತೆರೆಯುವ ವಿಶ್ವಾಸದಲ್ಲಿದೆ.

ಹೆಡ್ ಟು ಹೆಡ್ ಐಪಿಎಲ್ ನಲ್ಲಿ ಈವರೆಗೂ ಎರಡೂ ತಂಡಗಳು 16 ಪಂದ್ಯಗಳನ್ನಾಡಿದ್ದು, ಇದರಲ್ಲಿ ತಲಾ ಎಂಟೆಂಟು ಮ್ಯಾಚ್ ಗಳನ್ನ ಎರಡೂ ತಂಡಗಳು ಗೆದ್ದುಕೊಂಡಿವೆ. ಪಿಚ್ ರಿಪೋರ್ಟ್ ಇವತ್ತಿನ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಅಲ್ಲಿ ಚೇಸಿಂಗ್ ಮಾಡೋದು ಕಷ್ಟ ಅಂತ ಕಳೆದ ಪಂದ್ಯಗಳಿಂದಲೇ ಗೊತ್ತಾಗುತ್ತಿದೆ. ಯಾಕೆಂದ್ರೆ ಅಲ್ಲಿ ಈವರೆಗೂ ನಾಲ್ಕು ಮ್ಯಾಚ್ ಗಳು ನಡೆದಿದ್ದು, ಮೊದಲ ಚೇಸಿಂಗ್ ಮಾಡಿ ಆರ್ ಸಿಬಿ ವಿನ್ ಆಗಿದ್ದು ಬಿಟ್ಟರೇ ಉಳಿದ ಮೂರು ಮ್ಯಾಚ್ ಗಳಲ್ಲಿ ಮೊದಲು ಬ್ಯಾಟ್ ಮಾಡಿರುವ ತಂಡಗಳು ಜಯ ಸಾಧಿಸಿವೆ.

ಮುಖ್ಯವಾಗಿ ಲಾಸ್ಟ್ ಐದು ಓವರ್ ಗಳಲ್ಲಿ ರನ್ ಗಳಿಸೋದು ತುಂಬಾ ಕಷ್ಟಕರವಾಗಿದೆ. ಈ ಟ್ರೆಂಡ್ ನಲ್ಲಿ ಟಾಸ್ ಗೆದ್ದ ಕ್ಯಾಪ್ಟನ್ ಯಾವ ಆಯ್ಕೆ ಮಾಡ್ಕೋತಾರೆ..? ಅನ್ನೋದು ಕುತೂಹಲ ಕೆರಳಿಸಿದೆ. ಯಾಕೆಂದ್ರೆ ಸದ್ಯದ ಟ್ರೆಂಡ್ ಪ್ರಕಾರ ಟಾಸ್ ಗೆದ್ದ ಎಲ್ಲ ಕ್ಯಾಪ್ಟನ್ ಗಳು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಚೇಸಿಂಗ್ ಮಂತ್ರವನ್ನ ಬಿಡ್ತಾರಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

ಬಲಾಬಲ ಮುಂಬೈ : ಇಂಡಿಯನ್ಸ್ ಗೆ ಬ್ಯಾಟಿಂಗೇ ಪ್ರಮುಖ ಬಲ. ಆದ್ರೆ ಈ ಬಾರಿ ಮುಂಬೈ ಆಟಗಾರರು ಬ್ಲಾಸ್ಟ್ ಆಗಿಲ್ಲ. ರೋಹಿತ್, ಸೂರ್ಯ ಕುಮಾರ್ ಚೆನ್ನೈ ಪಿಚ್ ನಲ್ಲಿ ರನ್ ಗಳಿಸಿಲು ಪರದಾಡುತ್ತಿದ್ದಾರೆ. ಇದು ಒಂದು ಕಡೆಯಾದ್ರೆ ಪೋಲಾರ್ಡ್, ಹಾರ್ಧಿಕ್ ಪಾಂಡ್ಯ ಫೇಲ್ಯೂರ್ ತಂಡಕ್ಕೆ ಚಿಂತೆಯನ್ನುಂಟು ಮಾಡಿದೆ. ಬೌಲಿಂಗ್ ನಲ್ಲಿ ರಾಹುಲ್ ಚಹಾರ್, ಕೃನಾಲ್, ಬೂಮ್ರಾ, ಬೋಲ್ಟ್ ಬೋಲ್ಡ್ ಆಟವಾಡುತ್ತಿರೋದು ತಂಡಕ್ಕೆ ಬೂಸ್ಟ್ ನೀಡಿದೆ.

ಹೈದರಾಬಾದ್ : ಮೊದಲ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಬೌಲಿಂಗ್ ಧೂಳಿಪಟವಾದ್ರೂ ಎರಡನೇ ಪಂದ್ಯದಲ್ಲಿ ಬೌಲಿಂಗ್ ಸುಧಾರಿಸಿದೆ. ಮುಖ್ಯವಾಗಿ ಎಸ್ ಆರ್ ಹೆಚ್ ಗೆ ಮಿಡಲ್ ಆರ್ಡರ್ ಪ್ರಾಬ್ಲಂ ಆಗಿದೆ. ಮನೀಶ್ ಪಾಂಡೆ ರನ್ ಗಳಿಸುತ್ತಿದ್ದರೂ ಬೇಕಾದ ಸ್ಟೈಕ್ ನಲ್ಲಿ ರನ್ ಗಳಿಸುತ್ತಿಲ್ಲ. ಇನ್ನುಳಿದಂತೆ ಬೆನ್ ಸ್ಟ್ರೋ ಮಿಂಚಿ ಮರೆಯಾಗುತ್ತಿದ್ದಾರೆ. ರಶೀದ್ ಖಾನ್ ಬೌಲಿಂಗ್ ಪಾರ್ಮ್ ತಂಡದ ದೊಡ್ಡ ಬಲವಾಗಿದೆ. ಇಂದಿನ ಪಂದ್ಯದಲ್ಲಿ ಪೋಲಾರ್ಡ್, ಯಾದವ್ಮ ಹಾರ್ದಿಕ್ ಮೇಲೆ ಯಾವ ರೀತಿ ಬೌಲ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು. ಯಾಕೆಂದ್ರೆ ರಶೀದ್ ಖಾನ್ ವರ್ಸಸ್ ಬಿಗ್ ಹಿಟ್ಟಿಂಗ್ ಬ್ಯಾಟ್ಸ್ ಮೆನ್ ಗಳ ಮಧ್ಯೆ ಫೈಟ್ ನಡೆಯುತ್ತಲೇ ಬಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಇವರ ಹೋರಾಟ ಹೇಗಿರುತ್ತೆ ಅನ್ನೋದು ನೋಡಬೇಕಾಗಿದೆ.

ಬೆಸ್ಟ್ ಇಲೆವೆನ್ ಹೈದರಾಬಾದ್ : ವಾರ್ನರ್, ಬೆನ್ ಸ್ಟ್ರೋ, ಮನೀಶ್ ಪಾಂಡೆ, ಕೇಧಾರ್ ಜಾಧವ್, ಅಬ್ದುಲ್ ಸಮದ್, ವಿಜಯ್ ಶಂಕರ್, ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಶಹಬಾಜ್ ನದೀಮ್, ನಟರಾಜನ್ ಇಲ್ಲಿ ವೃದ್ಧಿಮಾನ್ ಸಹಾ ಬದಲು ಕೇಧಾರ್ ಜಾದರ್ ಗೆ ಜಾನ್ಸ್ ನೀಡುವ ಸಾಧ್ಯತೆ ಇದೆ. ಮುಂಬೈ : ರೋಹಿತ್, ಡಿ ಕಾಕ್, ಕಿಶಾನ್, ಸೂರ್ಯಕುಮಾರ್ ಯಾದವ್, ಹಾರ್ಧಿಕ್ ಪಾಂಡ್ಯ, ಪೋಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೋ ಜೆನ್ಸನ್, ಬೋಲ್ಟ್, ರಾಹುಲ್ ಚಹಾರ್, ಬೂಮ್ರಾ. ವಿನ್ನಿಂಗ್ ಚಾನ್ಸ್ ಆನ್ ಪೇಪರ್ ಟೀಂ ನೋಡಿದ್ರೆ ಖಂಡಿತ ಮುಂಬೈಗೆ ಗೆಲ್ಲುವ ಫೇವರೇಟ್ ತಂಡವಾಗಿದೆ. ಆದ್ರೆ ಹೈದರಾಬಾದ್ ಬೌಲರ್ ಗಳು ಶೈನ್ ಆದ್ರೆ ಹೈದರಾಬಾದ್ ಗೆ ಗೆಲ್ಲೋ ಚಾನ್ಸ್ ಇದೆ.

ವಿಡಿಯೋ ಕಾನ್ಫರೆನ್ಸ್ ವೇಳೆ ಪೂರ್ತಿ ಬೆತ್ತಲಾಗಿ ಕಾಣಿಸಿಕೊಂಡ ಸಂಸದ..!

ಮೈಸೂರು : ಜಮೀನು ವಿಚಾರದಲ್ಲಿ ಗಲಾಟೆ, ಕೊಲೆಯಲ್ಲಿ ಅಂತ್ಯ

ವಾಟ್ಸ್ ಆಪ್ ಬಳಕೆ ದಾರರೇ ಎಚ್ಚರ…. ಪಿಂಕ್ ವಾಟ್ಸಾಪ್ ಲಿಂಕ್ ನಿಂದ ದೂರವಿರಿ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd