ಬೆಂಗಳೂರು : ಗಾಂಜಾ ಮಾರಾಟ ಮಾಡಲು ಯತ್ನಿಸಿದವ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.. ಅಬಕಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ..
ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯು ತ್ರಿಪುರ ಮೂಲದವನಾಗಿದ್ದಾನೆ… 23 ವರ್ಷದ ಮತ್ರಾಚ್ ಅಲಿ ಬಾತ ಸದ್ಯ ಅರೆಸ್ಟ್ ಆಗಿದ್ದಾನೆ.. ಈತನನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ..
ಪುಟ್ಟೇನಹಳ್ಳಿ ಕೆರೆ ಬಳಿ ಈತ ಗಾಂಜಾ ಮಾರಾಟಕ್ಕೆ ಯತ್ನಿಸ್ತಿದ್ದ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.. ಆರೋಪಿ ಬಳಿಯಿಂದ ಅಬಕಾರಿ ಅಧಿಕಾರಿಗಳು 12 ಕೆ.ಜಿ ಗಾಂಜಾ ವಶಪಡಿಕೊಂಡಿದ್ದಾರೆ..









