ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ
ಮೊಬೈಲ್ ಹಣ ದೋಚಲು ಯತ್ನಿಸಿದ ವೇಳೆ ಘಟನೆ
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು
ಆರೋಪಿ ಸಬಾಸ್ಟೀನ್ ಬಂಧಿಸಿದ ಪೊಲೀಸರು
ಬೆಂಗಳೂರು : ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ನಡೆದಿದೆ.
ಕಾಮಾಕ್ಷಿ ಪಾಳ್ಯದ ಅಂಗಡಿ ಮುಂಭಾಗ ಮಲಗಿದ್ದ ವ್ಯಕ್ತಿಯ ಹಣ ಹಾಗು ಮೊಬೈಲ್ ದೋಚಲು ಆರೋಪಿ ಯತ್ನಿಸಿದ್ದ.
ಈ ವೇಳೆ ಎಚ್ಚರಗೊಂಡವನು ಆರೋಪಿಯನ್ನ ಹಿಡಿಯಲು ಯತ್ನಿಸಿದ್ದಾನೆ.. ಈ ವೇಳೆ ರಸ್ತೆ ಕೆಲಸಕ್ಕೆ ಇರಿಸಲಾಗಿದ್ದ ಸಿಮೇಂಟ್ ಬಾಂಡ್ ತಲೆಗೆ ಎತ್ತಿ ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದ..
ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು , ಆರೋಪಿ ಸಬಾಸ್ಟೀನ್ ನನ್ನ ಪೊಲೀಸರು ಬಂಧಿಸಿದ್ದಾರೆ.








