ಜೈಲಿನಿಂದ ಬಿಡುಗಡೆಯಾಗಿ 21 ದಿನಕ್ಕೆ ಕಳ್ಳತನಕ್ಕೆ ಇಳಿದವರು ಮತ್ತೆ ಜೈಲು ಸೇರಿದ್ದಾರೆ..
ಹೈಪೈ ಏರಿಯಾದಲ್ಲಿ ಕಾರು ಕಳ್ಳತನ ಮಾಡಲು ಹೋಗಿ ಖದೀಮರು ಸಿಕ್ಕಿಬಿದ್ದಿದದ್ದಾರೆ.. ಶೂಟರ್ ಸಲ್ಮಾನ್ ಮತ್ತು ನವಾಜ್ ಬಂಧಿತ ಆರೋಪಿಗಳಾಗಿದ್ದಾರೆ.. ಸದಾಶಿವನಗರ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.. ಕಳೆದ 21 ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಶೂಟರ್ ಸಲ್ಮಾನ್ ಮತ್ತೆ ಅರೆಸ್ಟ್ ಆಗಿದ್ದಾನೆ..
ಸದಾಶಿವನಗರ ಠಾಣಾ ವ್ಯಾಪ್ತಿಯ ಕಾರುಕಳ್ಳತನಕ್ಕೆ ಬಂದಿದ್ದ ಆರೋಪಿಗಳು ಪಲ್ಸರ್ ಬೈಕ್ ನಲ್ಲಿ ಬಂದು ಕಾರು ಕಳ್ಳತನ ಮಾಡುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ಧಾರೆ.. ಪಾರ್ಕಿಂಗ್ ಮಾಡಿದ್ದ ಕಾರನ್ನ ಕಳ್ಳತನ ಮಾಡಲು ಹೋಗಿದ್ದ ಶೂಟರ್ ಸಲ್ಮಾನ್ ಮತ್ತು ನವಾಜ್ ಸಿಕ್ಕಿಹಾಕಿಕೊಂಡಿದದ್ದಾರೆ.. ಮುನಿರಾಜು ಎನ್ನುವವರಿಗೆ ಸೇರಿದ್ದ ಕಾರನ್ನ ಕಳ್ಳತನ ಮಾಡಲು ಬಂದಿದ್ದರು ಎನ್ನಲಾಗಿದೆ..
ಎರಡು ಕಾರಿನ ಗಾಜು ಒಡೆದು ಸ್ಟೀಯರಿಂಗ್ ಬಾಕ್ಸ್ ಮುರಿದು ಕಳ್ಳತನಕ್ಕೆ ಯತ್ನ ಮಾಡಿದ್ದಾರೆ. ಕಾರನ್ನ ಕದಿಯಲು ಬಂದಿರೋದು ಗೊತ್ತಾಗಿ ಸಹಾಯಕ್ಕಾಗಿ ಮುನಿರಾಜು ಕಿರುಚಿದ್ದಾರೆ.. ಈ ವೇಳೆ ಮುನಿರಾಜವನ್ನ ಚಾಕುವಿನಿಂದ ಮುಗಿಸಿ ಬಿಡು ಎಂದು ಶೂಟರ್ ಸಲ್ಮಾನ್ ಕಿರುಚಾಡಿದ್ದಾನೆ ಎನ್ನಲಾಗಿದೆ…
ಮುನಿರಾಜು ಕೂಗಿದ್ದರಿಂದ ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ.. ಸ್ಥಳೀಯರನ್ನ ನೋಡಿ ಬೈಕ್ ಬಿಟ್ಟು ಎಸ್ಕೇಪ್ ಅಗಲು ಆರೋಪಿಗಳು ಯತ್ನಿಸಿದ್ದಾರೆ.. ಆರೋಪಿಗಳು ಕಾಂಪೌಂಡ್ ಹಾರಿ ಎಸ್ಕೇಪ್ ಅಗಲು ಯತ್ನಿಸಿದ್ಧಾರೆ.. ಕಾಂಪೌಂಡ್ ಹಾರಲಾಗದೆ ಸ್ಥಳಿಯರ ಕೈಗೆ ತಗಲಾಕಿಕೊಂಡಿದ್ದಾರೆ. ಇನ್ನೂ ಶೂಟರ್ ಸಲ್ಮಾನ್ ಮೇಲೆ ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಸೇರಿದಂತೆ ಬರೋಬ್ಬರಿ 11 ಪ್ರಕರಣಗಳಿವೆ.. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಮೆಹಬೂಬ್ ಉಮೆರ್ ರೌಡಿಶೀಟರ್ ಅಗಿದ್ದಾನೆ. ಸದ್ಯ ಇಬ್ಬರನ್ನು ಸದಾಶಿವ ನಗರ ಪೊಲೀಸರು ಬಂಧಿಸಿ ಜಜೈಲಿಗಟ್ಟಿದ್ದಾರೆ..