ಹಲ್ಲೆಗೆ ಯತ್ನಿಸಿದ ಆರೋಪಿಗಳು | ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು – Saaksha Tv
ಬೆಂಗಳೂರು: ಹುಡುಗಿ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಮಂಗಳವಾರ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
ಸೈಯದ್ ಮೋಯಿನ್ ಹಾಗೂ, ಅದ್ನಾನ್, ಅರ್ಬಾಜ್, ಮಜರ್, ಸೈಯದ್ ಸಾಕಿಬ್ ಬಂಧಿತ ಆರೋಪಿಗಳು. ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಉಸ್ಮಾನ್ ಹಾಗೂ ಮೋಯಿನ್ ನಡುವೆ ಹುಡುಗಿ ವಿಚಾರಕ್ಕಾಗಿ ಗಲಾಟೆಯಾಗಿದೆ. ಈ ವೇಳೆ ಮೊಹೀನ್ ಶಿವಾಜಿನಗರದಿಂದ ಹುಡುಗರನ್ನು ಕರೆಯಿಸಿಕೊಂಡು ಹತ್ಯೆ ಮಾಡಿಸಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಪುಲಕೇಶಿನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಮಾಹಿತಿ ಪಡೆದು ಸ್ಥಳ ಪರಿಶೀಲಿಸಿದ್ದ ಪಿಎಸ್ಐ ರೂಮಾನ್ ಮತ್ತು ಪಿಎ ಆನಂದ್ ನೇತೃತ್ವದ ತಂಡ ಹಂತಕರಿಗಾಗಿ ಬಲೆ ಬೀಸಿತ್ತು. ಇಂದು ಬೆಳಗಿವ ಜಾವ ಹಂತಕರ ಸುಳಿವು ಪಡೆದು ಮೋಹಿನ್ ಹಾಗೂ ಅದ್ನಾನ್ ಖಾನ್ ಬಂಧಿಸಲು ಹೋದ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.
ಅಲ್ಲದೇ ಆರೋಪಿಗಳಿಗೆ ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದರೂ, ಬಗ್ಗದ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿದೆ. ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.









