Bengaluru : ಹೋಟೆಲ್ ಒಂದ್ರಲ್ಲಿ ಸಿಲಿಂಡರ್ ಸ್ಪೋಟ , 7 ಮಂದಿಗೆ ಗಾಯ
ಬೆಂಗಳೂರು : ನಗರದ ಹೋಟೆಲ್ ಒಂದ್ರಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ ಬೆಳಕಿಗೆ ಬಂದಿದೆ.. ಇಂದ್ರ ನಗರದ ಹೆಚ್ ಡಿ ಎಫ್ ಸಿ ಸಿಗ್ನಲ್ ಬಳಿ ಇರುವ ಹೋಟೆಲ್ ನಲ್ಲಿ ಘಟನೆ ನಡೆದಿದ್ದು , ಕೆಲವರಿಗೆ ಗಾಯಗಳಾಗಿವೆ… ಶಾಂತಿಸಾಗರ ಹೋಟೆಲ್ ನಲ್ಲಿ ಘಟನೆ ನಡೆದಿದೆ.. ಸಿಲಿಂಡರ್ ಸ್ಫೋಟದಿಂದ ಕೆಲವರಿಗೆ ಗಾಯಗಳಾಗಿದ್ದು , ಸ್ಥಳಕ್ಕೆ ಇಂದ್ರನಗರ ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದದ್ದಾರೆ.
ಒಟ್ಟು 7 ಜನರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗ್ತಿದೆ. ಗಾಯಳುಗಳನ್ನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಪಾಲ್ ಪೂಜರಿ ಅವರಿಗೆ ಸೇರಿದ ಹೊಟೇಲ್ ನಲ್ಲಿ ಈ ಅನಾಹುತ ಸಂಭವಿಸಿದೆ.
ಗ್ಯಾಸ್ ಲೀಕ್ ಆಗುತ್ತಿದ್ದಂತೆ ಗ್ರಾಹಕರನ್ನ ಹೋಟೆಲ್ ಸಿಬ್ಬಂದಿ ತಕ್ಷಣ ಹೊರಗಡೆ ಕಳಿಸಿದ್ದಾರೆ.. 7 ಹೊಟೆಲ್ ಸಿಬ್ಬಂದಿ ಗಾಯಗೊಂಡಿದ್ದಾರೆ.. ಪರಿಶೀಲಿಸುವಷ್ಟರಲ್ಲೇ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ ಎನ್ನಲಾಗಿದೆ.
ಘಟನೆಯಲ್ಲಿ ಹೊಟೆಲ್ ಸಿಬ್ಬಂದಿಗಳಾದ ನರಸಿಂಹ (50) ಜಗ್ಗ (52) ಗಂಗಾಧರ (38) ಕೃಷ್ಣ (23) ಕೃಷ್ಣ (54) ಸೇರಿದಂತೆ 7 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರು ಉತ್ತರ ಭಾರತ ಮೂಲದ ಸಿಬ್ಬಂದಿಗಳಿದ್ದಾರೆ. ಪೈಪ್ ಸ್ಫೋಟಗೊಂಡಿದ್ದರಿಂದ ಗಾಯಗಳೊಂದಿಗೆ ಸಿಬ್ಬಂದಿ ಪಾರಾಗಿದ್ಧಾರೆ.