Bengaluru : ಉದ್ಯಮಿ ಕೊಲೆಗೆ ಕಾರಣವಾಯಿತು ಸಲಿಂಗಕಾಮ….
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಯುವ ಉದ್ಯಮಿಯೊಬ್ಬರನ್ನ ಅವರ ಆಪ್ತ ಸಹಾಯಕನೇ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಪೊಲೀಸರು ಹಣಕಾಸಿನ ಆರೋಪದ ಮೇಲೆ ಕೊಲೆ ಮಾಡಲಾಗಿದೆ ಎಂದು ಭಾವಿಸಿದ್ದರು. ಆದರೇ ತನಿಖೆಯಲ್ಲಿ ಮತ್ತೊಂದು ವಿಷಯ ಬೆಳಕಿಗೆ ಬಂದಿದ್ದು ಉದ್ಯಮಿ ಆಪ್ತ ಸಹಾಯಕನೊಂದಿಗೆ ಸಲಿಂಗಕಾಮಿ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ಅಪ್ತ ಸಹಾಯಕ ಸಲಿಂಗಕಾಮ ಸಂಬಂಧವನ್ನ ಕೊನೆಗಳಿಸುವ ಬೇಡಿಕೆಯನ್ನ ಉದ್ಯಮಿ ಒಪ್ಪದ ಕಾರಣಕ್ಕೆ ಕೊಲೆ ಮಾಡಲಾಗಿದೆ.
ಬೆಂಗಳೂರಿನ ಮೈಸೂರು ರಸ್ತೆಯ ನಾಯಂಡಹಳ್ಳಿಯ ಹಳೆ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ನಗರದಲ್ಲಿ ಜಾಹೀರಾತು ಏಜೆನ್ಸಿ ನಡೆಸುತ್ತಿದ್ದ 44 ವರ್ಷದ ಉದ್ಯಮಿ ಲಿಯಾಕತ್ ಅಲಿಖಾನ್ ಎಂಬಾತನಿಗೆ 26 ವರ್ಷದ ಶಂಕಿತ ಹಂತಕ ಇಲ್ಯಾಜ್ ಖಾನ್ (26) ಎಂಬಾತ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ತಂದೆಗಾಗಿ ಹುಡುಕಾಟ ನಡೆಸಿದ್ದ ಉದ್ಯಮಿಯ ಪುತ್ರನಿಗೆ ಫೆ.28ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕೊಲೆ ಮಾಡಿರುವುದು ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಆಪ್ತ ಸಹಾಯಕ ಇಲಿಯಾಜ್ ಮಹಿಳೆಯನ್ನ ಮದುವೆಯಾಗಲು ಬಯಸಿದ್ದ. ಇಲಿಯಾಜ್ ಮದುವೆಯ ಬಗ್ಗೆ ಲಿಯಾಕತ್‌ಗೆ ತಿಳಿಸಿ ಸಂಬಂಧಕೊನೆಗೊಳಿಸಲು ಯತ್ನಿಸಿದಾದ ,ಲಿಯಾಕತ್ ನಿರಾಕರಿಸಿ ಸಂಬಂಧ ಮುಂದುವರೆಸುವಂತೆ ಒತ್ತಾಯಿಸಿದ್ದಾನೆ. ಇದು ಭೀಕರ ಹತ್ಯೆಗೆ ಕಾರಣವಾಗಿದೆ.
ಉದ್ಯಮಿ ಮಗ ನೀಡಿದ ದೂರಿನ ನಂತರ, ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನ ಬಂಧಿಸಿದ್ದಾರೆ.
Bengaluru : Homosexuality led to the murder of a businessman….