ಇನ್ನೊಂದು ವಾರದಲ್ಲಿ ಮುನಿರತ್ನಗೆ ಮಂತ್ರಿಪಟ್ಟ : ವಿ.ಸೋಮಣ್ಣ ಭವಿಷ್ಯ Bengaluru
ಬೆಂಗಳೂರು : ಆರ್ ಆರ್ ನಗರದ ಶಾಸಕ ಮುನಿರತ್ನ ಅವರು ಇನ್ನೊಂದು ವಾರದಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಟು ಹತ್ತು ದಿನಗಳಲ್ಲಿ ಮುನಿರತ್ನ ಸಚಿವರಾಗುತ್ತಾರೆ.
ಪಕ್ಷತೀತವಾಗಿ ಜಾತ್ಯತೀತವಾಗಿ ಮುನಿರತ್ನ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಸುಭೀಕ್ಷ ಸರ್ಕಾರ ಬರಬೇಕು ಒಳ್ಳೆಯ ಕೆಲಸ ಆಗಬೇಕಾದರೆ ಇಂತಹ ಶಾಸಕರು ಬರಬೇಕು.
ಇನ್ನೊಂದು ವಾರದಲ್ಲಿ ಅವರು ಮಂತ್ರಿ ಆಗಲಿ. ಬಳಿಕ ರಾಜರಾಜೇಶ್ವರಿ ದೇವರ ದರ್ಶನವನ್ನ ನಾವಿಬ್ಬರು ಒಟ್ಟಿಗೆ ಮಾಡ್ತೇವೆ ಎಂದು ಹೇಳಿದ್ದಾರೆ.
ಅಂದಹಾಗೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿಚಾರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಬೆಂಗಳೂರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಸಚಿವರು ಭವಿಷ್ಯ ನುಡಿದಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.










