Bengaluru : ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನಾ ರ್ಯಾಲಿ
ಅಂಗನವಾಡಿ ಕಾರ್ಯಕರ್ತೆಯರು ವಿಧಾನಸೌಧದ ವರೆಗೂ ಪ್ರತಿಭಟನೆ ಮಾಡಿದ್ದಾರೆ… ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಿಧಾನಸೌಧ ಮುತ್ತಿಗೆ ಹಾಕಲು , ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ( VidhanaSoudha) ಬೃಹತ್ ರ್ಯಾಲಿ ಕೈಗೊಂಡಿದ್ದಾರೆ.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ಧಾರೆ.. ಅಧಿವೇಶನದಲ್ಲಿ ತಮ್ಮ ಕನಿಷ್ಠ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಷ್ಕರ ಕೈಗೊಂಡಿದ್ದರು. ರಾಜ್ಯದ ಬೇರೆ ಬೇರೆ ಕಡೆಗಳಿಂದ ಮೂರು ದಿನಕ್ಕೆ ಆಗುವಷ್ಟು ಊಟ, ಬಟ್ಟೆಯೊಂದಿಗೆ ಬೆಂಗಳೂರಿಗೆ ಬರಲು ಸಂಘಟನೆಯಿಂದ ಕರೆ ನೀಡಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕು, ಸೇವಾಹಿರಿತನದ ಆಧಾರದ ಮೇಲೆ ಸಂಬಳ ಹೆಚ್ಚಿಸ್ಬೇಕು , ಈ ಹಿಂದೆ ಇಲಾಖೆಯಿಂದ ಸರ್ಕಾರಕ್ಕೆ ನೀಡಿರುವ ಮನವಿಯಂತೆ ನೀಡ್ಬೇಕು, ರಾಷ್ಟ್ರೀಯ ಶಿಕ್ಷಣ ಯೋಜನೆಯಾದ(NEP) LKG, UKG ಅಂಗನವಾಡಿಗಳಲ್ಲಿ ತೆರೆದು ಅಂಗನವಾಡಿ ಕಾರ್ಯಕರ್ತೆಯರನ್ನೆ ನೇಮಿಸ್ಬೇಕು.
ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಜೀವನ ನಡೆಸಲು ಪೆನ್ಶನ್ ಜಾರಿ ಮಾಡ್ಬೇಕು, ಮಿನಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸ್ಬೇಕು ಎಂಬುದು ಅಂಗನವಾಡಿ ಕಾ-ರ್ಯಕರ್ತೆಯರ ಪ್ರಮುಖ ಬೇಡಿಕೆಗಳಾಗಿವೆ.









