ಸಾಲ ತೀರಿಸಲು ರಕ್ತ ಚಂದನ ಸ್ಮಗ್ಲಿಂಗ್ – ಜಿಮ್ ಮಾಲಿಕ ಅರೆಸ್ಟ್…
ಸಾಲ ತಿರಿಸಲೆಂದು ಅಡ್ಡದಾರಿಗಿಳಿದ ಜಿಮ್ ಮಾಲಿಕ ಸ್ಮಂಗ್ಲಿಗ್ ಮೂಲಕ ಹಣ ಗಳಿಸಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ರೆಡ್ ಸ್ಯಾಂಡಲ್ ಮಾರಟಕ್ಕೆ ಮುಂದಾದ ವ್ಯಕ್ತಿಯನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಾಣಸವಾಡಿ ಪೊಲೀಸರು ಬಂದಿತ ಆರೋಪಿ ಕಲ್ಲೇಗೌಡ ನಿಂದ 12 ಲಕ್ಷ ಮೌಲ್ಯದಷ್ಟು ರಕ್ತ ಚಂದನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲೇಗೌಡ ಜೀಮ್ ಆರಂಭಿಸಲು 27 ಲಕ್ಷ ಸಾಲ ಮಾಡಿಕೊಂಡಿದ್ದ. ಜಿಮ್ ಲಾಸ್ ಆಗಿದ್ದರಿಂದ ಸಾಲ ತೀರಿಸುವ ಚಿಂತೆಯಲ್ಲಿದ್ದ ಆರೋಪಿ ಬೇಗ ಹಣ ಮಾಡಲು ರಕ್ತ ಚಂದನ ಮಾರಟಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಡೀಲಿಂಗ್ ಕುದುರಿಸುವ ವೇಳೆ ಖಾಕಿ ಬೀಸಿದ ಬಲೆಗೆ ಬಿದ್ದು ಆರೋಪಿ ಲಾಕ್ ಆಗಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Bengaluru: Rakta Chandan smuggling to pay off debt – gym owner Malika…








