Bengaluru | ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ – ನಾನಾ ಅವಾಂತರಗಳು..
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ.
ಅದರಂತೆ ನಿನ್ನೆ ರಾತ್ರಿ ಕೂಡ ನಗರದಲ್ಲಿ ಭಾರಿ ವರ್ಷಧಾರೆಯಾಗಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಮಳೆಯಿಂದಾಗಿ ಮೆಜೆಸ್ಟಿಕ್ ನಲ್ಲಿ ತಡೆಗೋಡೆ ಕುಸಿದಿದ್ದು, ಏಳು ಕಾರುಗಳು ಜಖಂಗೊಂಡಿವೆ.

ಶಿವಾನಂದ ಅಂಡರ್ ಪಾಸ್ ನಲ್ಲಿ ಡಾಂಬಾರ್ ಕಿತ್ತು ಹೋಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.
ಶಿವಾಜಿನಗರದಲ್ಲಿ ಮಳೆಗೆ ಬೈಕ್ ಕೊಚ್ಚಿ ಹೋಗಿದೆ. ವಿಧಾನಸೌಧ ರಸ್ತೆಯಲ್ಲಿ ಮಂಡಿಯುದ್ದಕ್ಕೂ ನೀರು ನಿಂತಿತ್ತು.
ಇದರಿಂದ ವಾಹನ ಸವಾರರು ಪರದಾಡುವಂತಾಯಿತು.
ಮತ್ತೊಂದು ಕಡೆ ಬಾಪೂಜಿ ಲೇಔಟ್ ನಲ್ಲಿ ಗಾಳಿ ಮಳೆಗೆ ವಿದ್ಯುತ್ ಲೈನ್ ಮತ್ತು ಕೇಬಲ್ ಗಳ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿತ್ತು.








