ಬೈಕ್ ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಲ್ಲಾಸ್ ಅಲಿಯಾಸ್ ವಾಲಿ, ರಘು ನಾಯಕ್ ಅಲಿಯಾಸ್ ರಘು, ನಂದನ ಅಲಿಯಾಸ್ ನಂದು ಬಂಧಿತ ಆರೋಪಿಗಳಾಗಿದ್ದಾರೆ..
ಇವರು ನಗರದ ಹಲವೆಡೆ ಬೈಕ್ ಕಳ್ಳತನ ಮತ್ತು ಮನೆಗಳ್ಳತನ ಮಾಡ್ತಿದ್ದರು. ಬೈಕ್ ಕಳ್ಳತನ ಮಾಡಿ ಹೊರವಲಯದಲ್ಲಿ ಮನೆಗಳ್ಳತನ ಮಾಡ್ತಿರು. ಬೀಗ ಹಾಕಿರೋ ಮನೆಗಳನ್ನ ಟಾರ್ಗೆಟ್ ಮಾಡಿ ಕನ್ನ ಹಾಕ್ತಿದ್ದರು.
ಆರೋಪಿಗಳ ಬಂಧನದ ನಂತರ ಹಲವು ಪ್ರಕರಣಗಳು ಪತ್ತೆಯಾಗಿವೆ.. ಕೋಣನಕುಂಟೆ ಠಾಣೆ -3, ಜಿಗಣಿಯಲ್ಲಿ 1 ಕನ್ನ ಕಳ್ಳತನ, ಬೊಮ್ಮನಹಳ್ಳಿಯಲ್ಲಿ 15 ಬೈಕ್, ಹೆಬ್ಬಗೋಡಿಯಲ್ಲಿ 1KTM ಬೈಕ್ ಕಳ್ಳತನ ಪ್ರಕರಣಗಳು ಇವರ ಮೇಲಿರುವುದು ಬೆಳಕಿಗೆ ಬಂದಿದೆ..
ಸದ್ಯ ಆರೋಪಿಗಳನ್ನ ಕೋಣನಕುಂಟೆ ಪೊಲೀಸರು ಬಂಧಿಸಿದ್ದು , ಬಂಧಿತರಿಂದ 10ಲಕ್ಷ ಮೌಲ್ಯದ ಚಿನ್ನಾಭರಣಗಳು, 3ಲಕ್ಷ ಮೌಲ್ಯದ ಬೈಕ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.