Bengaluru: ಲಂಚ ಪಡೆಯುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಟ್ರಾಫಿಕ್ ಇನ್ಸ್​​​ಪೆಕ್ಟರ್  

1 min read
Bengaluru Saaksha Tv

ಲಂಚ ಪಡೆಯುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದ ಟ್ರಾಫಿಕ್ ಇನ್ಸ್​​​ಪೆಕ್ಟರ್

ಬೆಂಗಳೂರು: 20 ಸಾವಿರ ಲಂಚ ಕೇಳಿದ ಆರೋಪದಲ್ಲಿ ಬೆಂಗಳೂರಿನ ಚಿಕ್ಕಜಾಲ ಟ್ರಾಫಿಕ್ ಇನ್ಸ್​​​ಪೆಕ್ಟರ್ ಹಂಸವೇಣಿ ಎಸಿಬಿ ಅಧಿಕಾರಿಗಳಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ.

ಗ್ಯಾಸ್ ಕಂಪನಿಯ ಪೈಪ್​ಲೈನ್ ಅಗೆಯಲು ಅನುಮತಿ ನೀಡುವ ವಿಚಾರಕ್ಕೆ ಟ್ರಾಫಿಕ್ ಇನ್ಸ್​​​ಪೆಕ್ಟರ್ ಹಂಸವೇಣಿ 20 ಸಾವಿರ ಲಂಚ ಕೇಳಿದ್ದರು.  ಈ ಸಂಬಂಧ ಪೈಪ್ ಲೈನ್ ನವರು ಎಸಿಬಿಗೆ ದೂರು ನೀಡಿದ್ದರು.

ಕಳೆದ ವರ್ಷದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಹಂಸವೇಣಿ, ಕಳೆದ ಕೆಲವು ದಿನಗಳಿಂದ ರಸ್ತೆ ಅಗೆಯಲು ಅನುಮತಿಗಾಗಿ ಲಂಚಕ್ಕೆ‌ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಹಣದ ಸಮೇತ ಇನ್ಸ್​ಪೆಕ್ಟರ್​ ಹಂಸವೇಣಿ ಸಿಕ್ಕಿಬಿದ್ದಾರೆ.

ಕೇಂದ್ರ ಸರ್ಕಾರದ ಗೇಲ್​​ ಗ್ಯಾಸ್ ಕಂಪನಿಯ ಪೈಪ್​ಲೈನ್ ಅಗೆಯುವ ವಿಚಾರಕ್ಕೆ ಅನುಮತಿ ನೀಡಲು ಚಿಕ್ಕಜಾಲ ಟ್ರಾಫಿಕ್ ಇನ್ಸ್​ಪೆಕ್ಟರ್​ ಹಂಸವೇಣಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd