Bengaluru : ಮನೆ ಮಾರಲು ಮರ ಅಡ್ಡಿ : ಮರಕ್ಕೆ ವಿಷಪ್ರಾಷನ
ಬೆಂಗಳೂರು : ಮನೆ ಮಾರಲು ಮರ ಅಡ್ಡಿ ಬಂದ ಕಾರಣಕ್ಕೆ ಮನೆಮಾಲೀಕರು ಮರಕ್ಕೆ ವಿಷ ಹಾಕಿರೋದಾಗಿ ಸ್ಥಳೀಯರು ಆರೋಪ ಮಾಡಿರುವ ಘಟನೆ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.. 30 ವರ್ಷ ಹಳೆಯ ಟಿಬಿಬಿಯಾ ಮರಕ್ಕೆ ವಿಷ ಹಾಕಲಾಗಿದೆ ಎನ್ನಲಾಗಿದೆ.
ಮರಕ್ಕೆ 11 ಕಡೆ ಕೊರೆದು ವಿಷ ಹಾಕಲಾಗಿದೆ. ಇದ್ರಿಂದ ಸದ್ಯ ಶೇ.45 ರಷ್ಟು ಮರ ಒಣಗಿದೆ.. ಸ್ಥಳೀಯರಿಂದ ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿ ಅರಣ್ಯ ಸಿಬ್ಬಂದಿಗಳು ಮರದ ಆರೈಕೆ ಮಾಡ್ತಿದ್ದಾರೆ.
ಮರ ತಜ್ಞ ವಿಜಯ್ ನಿಶಾಂತ್ ಅವರು ಮರದಲ್ಲಿದ್ದ ರಂದ್ರಗಳಿಂದ ವಿಷ ಹೊರಗೆ ತೆಗೆದಿದ್ದಾರೆ. ಮರ ಪುನಶ್ಚೇತನಕ್ಕೆ ಬೇಕಾದ ಔಷಧಿ ತುಂಬಲಾಗಿದೆ. ಪುನಶ್ಚೇತನದ ಔಷಧಿ ಸಹ ಬಳಕೆ ಮಾಡಲಾಗಿದೆ.
ಮನೆ ಮಾಲೀಕನ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಮನೆಯಲ್ಲಿ ಮಾಲೀಕ ಇರದೆ, ಬಾಡಿಗೆದಾರರು ಮಾತ್ರ ಇದ್ದರು ಎನ್ನಲಾಗಿದೆ.. ಸದ್ಯ ಮಾಲೀಕನ ಮಾಹಿತಿ ಕಲೆಹಾಕಲಾಗ್ತಿದೆ. ಕಾರಣ ತಿಳಿದರೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಲಯ ಉಪ ವಲಯ ಅರಣ್ಯಾಧಿಕಾರಿ ಗೋವಿಂದರಾಜು ಮಾಹಿತಿ ನೀಡಿದ್ಧಾರೆ.