ಶ್ವಾನಗಳಿಗೆ ವಿಷ ಹಾಕಿ ಕೊಂದ ಪಾಪಿಗಳು
ಬೆಂಗಳೂರು: ಕಿಡಿಗೇಡಿಗಳು ನಾಯಿಗಳಿಗೆ ವಿಷ ಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ.
4 ದಿನಗಳ ಹಿಂದೆ (ಬುಧವಾರ) ಪಾಪಿಗಳು 9 ಶ್ವಾನಗಳಿಗೆ ತಿನ್ನೋ ಆಹಾರದಲ್ಲಿ ವಿಷ ಹಾಕಿದ್ದಾರೆ. ಪರಿಣಾಮ ಮೂರು ಶ್ವಾನಗಳು ಬುಧವಾರವೇ ಸಾವನ್ನಪ್ಪಿವೆ. ಉಳಿದ 6 ನಾಯಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು ಆದರೆ ಚಿಕಿತ್ಸೆ ಫಲಿಸದೇ ಎಲ್ಲಾ ಶ್ವಾನಗಳು ಸಾವನ್ನಪ್ಪಿವೆ. ಸೋಮವಾರ ಎಲ್ಲಾ ಶ್ವಾನಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಶ್ವಾನಗಳಿಗೆ ವಿಷ ಹಾಕಿ ಕೊಂದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಹೋರಾಟಗಾರ ಅರುಣ್ ಪ್ರಾಣಿಗಳಿಗೆ ವಿಷ ಹಾಕಿ ಕೊಲ್ಲುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಅಡಿಯಲ್ಲಿ ಅಪರಾಧ. ನಾಯಿಗಳಿಗೆ ಆಹಾರದಲ್ಲಿ ವಿಷ ಹಾಕುವುದರಿಂದ ಇತರ ಪ್ರಾಣಿಗಳೂ ಸಾಯುವ ಸಾಧ್ಯತೆ ಇರುತ್ತದೆ.
ಎಲ್ಲಾ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದೇವೆ’. ಮೂಕ ಪ್ರಾಣಿಗಳಿಗೆ ವಿಷ ಹಾಕಿ ಕೊಂದವರು ಸೈಕೋ ಕಿಲ್ಲರ್ಗಳು, ಇದು ಒಂದು ಕ್ರೂರ ಕೃತ್ಯ, ವಿಷ ಹಾಕಿದವರನ್ನು ಪೊಲೀಸರು ಪತ್ತೆ ಹಚ್ಚಿ ಅವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಅರುಣ್ ಆಗ್ರಹಿಸಿದ್ದಾರೆ.