ಬೆಂಗಳೂರು : ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಬೆಂಕಿ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲ ಎಂದಿದ್ದಾರೆ.
ಘಟನೆ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ ಯು.ಟಿ ಖಾದರ್, ಲೋಕಕ್ಕೆ ಸೌಹಾರ್ದತೆ, ಸಮಾನತೆ ಹಾಗೂ ಮಾನವೀಯತೆ ಸಾರಿದ ವಿಶ್ವ ಪ್ರವಾದಿ ಮೊಹಮ್ಮದ್ ರವರನ್ನು ನಿಂದನೆ ಮಾಡಿದವರ ವಿರುದ್ದ ಗರಿಷ್ಠ ಕ್ರಮ ಕೈಗೊಳ್ಳಲೇ ಬೇಕು. ಆದರೆ ಇದೇ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡುವುದನ್ನ ಒಪ್ಪುವುದು ಸಾಧ್ಯವೇ ಇಲ್ಲ.
ಬೆಂಕಿ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲ, ಏನೇ ಇದ್ದರೂ ಈ ನೆಲದ ಕಾನೂನೇ ಅಂತಿಮ, ಎಲ್ಲರೂ ಶಾಂತಿ ಕಾಪಾಡಿ,ಕಾನೂನು ಹೋರಾಟದಲ್ಲಿ ನಂಬಿಕೆ ಇಟ್ಟುಕೊಳ್ಳಿ. ಕೇವಲ ಬೆಂಗಳೂರಷ್ಟೇ ಅಲ್ಲ ರಾಜ್ಯದ ಯಾವುದೇ ಹಳ್ಳಿಯಲ್ಲೂ ಇಂತಹ ಘಟನೆಗೆ ಅವಕಾಶ ನೀಡಬಾರದು.
https://twitter.com/utkhader/status/1293309937725014018?s=20
ಪೊಲೀಸ್ ಇಲಾಖೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಿಂದನೆಯಂತಹ ಪ್ರಕರಣವನ್ನ ಆರಂಭಿಕ ಹಂತದಲ್ಲೇ ಇತ್ಯರ್ಥಗೊಳಿಸಿದ್ರೆ ಪರಿಸ್ಥಿತಿ ಕೈ ಮೀರಿ ಹೋಗುವುದಿಲ್ಲ. ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಅಷ್ಟೆ ಎಂದು ಬರೆದುಕೊಂಡಿದ್ದಾರೆ.








