ಬೆಂಗಳೂರು : ತಮ್ಮ ನಿವಾಸದ ಮೇಲೆ ನಡೆದ ದಾಳಿ ಬಗ್ಗೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಸುದ್ದಿಗೋಷ್ಟಿ ನಡೆಸಿದ್ದು, ಘಟನೆ ಬಗ್ಗೆ ವಿವರಿಸುತ್ತಾ ಭಾವುಕರಾಗಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಶ್ರೀನಿವಾಸಮೂರ್ತಿ, ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ ಎಂದು ಸರ್ಕಾರಕ್ಕೆ ಮನವಿ ಮಾಡ್ತೇನೆ. ಜನಪ್ರತಿನಿಧಿಗೆ ರಕ್ಷಣೆ ಇಲ್ಲದೆ ಹೋದ್ರೆ ಕಷ್ಟ. ಲಾಂಗ್, ಮಚ್ಚುಗಳಿಂದ ದಾಳಿ ನಡೆದಿದೆ. ಮನೆಗೆ ಬೆಂಕಿ ಹಚ್ಚಿ ಹಾಳು ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನವೀನ್ ಬಗ್ಗೆ ಮಾತನಾಡಿದ ಶ್ರೀನಿವಾಸಮೂರ್ತಿ, ನವೀನ್ ಅಕ್ಕನ ಮಗ. ಅವನ ಜೊತೆ ನಾನು ಸಂಬಂಧ ಹೊಂದಿಲ್ಲ. 10 ವರ್ಷದಿಂದ ಮಾತನಾಡ್ತಿಲ್ಲ ಎಂದರು.
ಇನ್ನು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡ್ತೇನೆ. ಅನೇಕ ವರ್ಷಗಳಿಂದ ಬಾಳಿ-ಬದುಕಿದ್ದ ಮನೆ ಸುಟ್ಟು ಭಸ್ಮವಾಗಿದೆ. ಸಹೋದರರ ಮನೆಗೂ ಬೆಂಕಿ ಹಚ್ಚಿದ್ದಾರೆ. ಎಲ್ಲರೂ ಬೀದಿಪಾಲಾಗಿದ್ದೇವೆಂದು ಶ್ರೀನಿವಾಸಮೂರ್ತಿ ಸುದ್ದಿಗೋಷ್ಟಿಯಲ್ಲಿ ಕಣ್ಣೀರಿಟ್ಟಿದ್ದಾರೆ.