israel election : ಅಧಿಕಾರದತ್ತ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ…
ಇಸ್ರೇಲ್ ಸಾರ್ವತ್ರಿಕ ಚುನಾವಣೆಯ ನಂತರ ಮತಗಳ ಎಣಿಕೆ ಮುಂದುವರಿತ್ತಿದ್ದು ಇಲ್ಲಿಯವರೆಗೆ ಶೇಕಡ 85 ರಷ್ಟು ಮತ ಎಣಿಕೆ ಕಂಪ್ಲೀಟ್ ಆಗಿದೆ. ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಬಹುಮತ ಸಾಧಿಸುವ ಸಾಧ್ಯತೆ ಇದೆ.
ನೆತನ್ಯಾಹು ಗೆದ್ದರೆ, ಪ್ಯಾಲೆಸ್ತೀನ್ರನ್ನ ತಡೆಯಲು ನಿರ್ಮಿಸಲಾಗುತ್ತಿರುವ ಗೋಡೆಯ ಕೆಲಸವನ್ನ ಮುಂದುವರೆಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಶೂನ್ಯ-ಸಹಿಷ್ಣು ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಗೋಡೆಯ ಅಗತ್ಯವಿದೆ ಎಂದು ನೆತನ್ಯಾಹು ನಂಬಿದ್ದಾರೆ.
ನೆತನ್ಯಾಹು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರೇ, ಭಾರತ ಮತ್ತು ಇಸ್ರೇಲ್ ದೇಶಗಳು ಭಯೋತ್ಪಾದನೆ, ತಂತ್ರಜ್ಞಾನ ಮತ್ತು ದ್ವಿಪಕ್ಷೀಯ ವ್ಯಾಪಾರದಲ್ಲಿ ಒಟ್ಟಾಗಿ ಕೆಲಸ ಮಾಡಬಹುದು. ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದವೂ ಆಗಬಹುದು.
ನೆತನ್ಯಾಹು ಮತ್ತು ಪ್ರಧಾನಿ ಮೋದಿ ಉತ್ತಮ ಬಾಂಧವ್ಯವನ್ನ ಹೊಂದಿದ್ದಾರೆ. ಇಸ್ರೇಲ್ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ. ನೆತನ್ಯಾಹು ಅವರು ಪ್ರಧಾನಿಯಾಗಿ 5 ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ್ದರು.
Benjamin Netanyahu; Israel Election Results
ಇದನ್ನೂ ಓದಿ : https://saakshatv.com/gujarat-election…5-d-result-for-8/