ಕೊರೊನಾ ವ್ಯಾಕ್ಸಿನ್ ನೀಡಲು ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆ
ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯವಾಗಲಿದೆ. ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದೀಗ ಲಸಿಕೆ ಸಂಗ್ರಹಣೆಗೆ ಕೋಲ್ಡ್ ಚೈನ್ ವ್ಯವಸ್ಥೆಯ ಲಭ್ಯತೆ ಬಗ್ಗೆ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ.
ವ್ಯಾಕ್ಸಿನ್ ಸ್ಟೋರೇಜ್ ಹಾಗೂ ಸಾಗಣೆ ವಿಚಾರದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ 2 ನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಕೋಲ್ಡ್ ಚೈನ್ ಪಾಯಿಂಟ್ಸ್, ವಾಕ್ ಇನ್ ಕೂಲರ್ಸ್, ಐಸ್ ಲೈನ್ ರೆಫ್ರಿಜರೇಟರ್, ಡೀಪ್ ಫ್ರೀಜರ್ ನ ಉತ್ತಮ ವ್ಯವಸ್ಥೆ ಹೊಂದಿದೆ.
ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ತಯಾರಿ ನಡೆಸಿದೆ. ಜೊತೆಗೆ ಕೇಂದ್ರ ಸರ್ಕಾರ ಸಹ ಇನ್ನಷ್ಟು ವ್ಯವಸ್ಥೆ ಒದಗಿಸಲು ಒಪ್ಪಿಗೆ ಸೂಚಿಸಿದೆ.
ವ್ಯಾಕ್ಸಿನ್ ನೀಡಲು ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆ ಇರುವುದು ಈ ಅಂಕಿ ಅಂಶಗಳಿಂದ ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel