ಒಂದೇ ಜೂಮ್ ಮೀಟಿಂಗ್ ನಲ್ಲಿ 900 ಉದ್ಯೋಗಿಗಳು ಕೆಲಸದಿಂದ ವಜಾ
ಒಂದೇ ಒಂದು ಜೂಮ್ ಮೀಟಿಂಗ್ ನಲ್ಲಿ 900 ಜನರನ್ನ ಕೆಲಸದಿಂದ ವಜಾ ಮಾಡಿ ಕಂಪನಿ ಆದೇಶಿಸಿದೆ, ಯುಎಸ್ ಮೂಲದ ಮನೆ ಅಡಮಾನ ಮತ್ತು ಮನೆ ಮಾಲೀಕತ್ವದ ಕಂಪನಿ ಈ ಕೆಲಸ ಮಾಡಿದೆ. ಭಾರತ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಗಾರ್ಗ್ ಕಳೆದ ವಾರ ಜೂಮ್ ಕರೆಯಲ್ಲಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ.
ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯ ಕೊರತೆ ಕಾರಣ ಮುಂದಿಟ್ಟುಕೊಂಡು 900 ಉದ್ಯೋಗಿಗಳನ್ನ ಕೆಲಸದಿಂದ ವಜಾ ಮಾಡಲಾಗಿದೆ. ಯುಎಸ್ ಮತ್ತು ಭಾರತದ ಉದ್ಯೋಗಿಗಳನ್ನ ವಜಾ ಮಾಡಿರುವುದಾಗಿ ತಿಳಿದುಬಂದಿದೆ.
2014 ರಲ್ಲಿ ಪ್ರಾರಂಭವಾದ Better.com “ಮನೆ ಅಡಮಾನವನ್ನು ಸುಧಾರಿಸುವುದು” ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಲು ಮತ್ತು ಆನ್‌ಲೈನ್‌ನಲ್ಲಿ ಹಣಕಾಸು ಒದಗಿಸುವ ಮೂಲಕ ಹಣವನ್ನು ಒದಗಿಸುವ ಮೂಲಕ ಕೆಲಸ ಮಾಡುತ್ತದೆ,
ನೌಕರರನ್ನು ಏಕೆ ವಜಾ ಮಾಡಲಾಯಿತು?
ಜೂಮ್ ಕರೆ ಪ್ರಕಾರ, ಮಾರುಕಟ್ಟೆ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯ ಕೊರತೆಯು ಜನರನ್ನು ಕೈಬಿಡಲು ಕಾರಣ ಎಂದು ಗಾರ್ಗ್ ಹೇಳಿದರು. ಗರ್ಗ್ ಅವರು ನೌಕರರು ತಮ್ಮ ಸಹೋದ್ಯೋಗಿಗಳು ಮತ್ತು ಗ್ರಾಹಕರಿಂದ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಸರಿಯಾಗಿ ಕೆಲಸ ಮಾಡುತ್ತಿಲ್ಲ ದಿನಕ್ಕೆ ಎರಡು ಗಂಟೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಆರೋಪಿಸಿ ವಜಾ ಮಾಡಿದ್ದಾರೆ.








