ಭದ್ರಾವತಿ : ಎಟಿಎಂ ಕಳುವಿಗೆ ಯತ್ನಿಸಿದ್ದವನ ಬಂಧನ

1 min read
ATM

ಭದ್ರಾವತಿ : ಎಟಿಎಂ ಕಳುವಿಗೆ ಯತ್ನಿಸಿದ್ದವನ ಬಂಧನ

ಭದ್ರಾವತಿ : ನಗರದ ಬಿ.ಹೆಚ್ ರಸ್ತೆಯ ಕೆನರಾ ಬ್ಯಾಂಕ್ ನ ಎಟಿಎಂ ಕಳುವಿಗೆ ಯತ್ನಿಸಿದ್ದ ವ್ಯಕ್ತಿಯಲ್ಲಿ ಓಲ್ಡ್ ಟೌನ್ ಪೊಲೀಸರು ಬಂಧಿಸಿದ್ದಾರೆ.

ಅರಳಿಹಳ್ಳಿ ಬಸಲಿಕಟ್ಟಯ ಅಸಾದುಲ್ಲಾ ಅಲಿಯಾಸ್ ಹರ್ಷದ್ 31 ಬಂಧಿತ ಆರೋಪಿಯಾಗಿದ್ದಾನೆ. ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕನಾಗಿದ್ದ ಈತ ಕಳ್ಳತನ ಪ್ರವೃತ್ತಿ ಯನ್ನಾಗಿ ಮಾಡಿಕೊಂಡಿದ್ದ.

ATM

ಎರಡು ದಿನಗಳ ಹಿಂದೆ ಈತ ಭದ್ರಾವತಿ ಬಿ.ಹೆಚ್ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕಳುವಿಗೆ ವಿಫಲ ಯತ್ನಿಸಿದ್ದ. ಎಟಿಎಂ ಗೆ ಪ್ರವೇಶಿಸಿದ ಅಸಾದುಲ್ಲಾ ಸ್ಪಾನರ್ ಮತ್ತಿತರ ಪರಿಕರಗಳಿಂದ ಎಟಿಎಂ ಮೆಷನ್ ಒಡೆಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು.

ಬ್ಯಾಂಕ್ ಮ್ಯಾನೇಜರ್ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿ ಕ್ಯಾಮರಾ ಪೂಟೇಜ್ ನಲ್ಲಿದ್ದ ಆರೋಪಿ ಬೆನ್ನು ಬಿದ್ದ ಪೊಲೀಸರು ಕೊನೆಗೂ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd