94 ವಯಸ್ಸಿನಲ್ಲಿ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದ ಭಗವಾನ್ ದೇವಿ….
ಭಾರತ ಯುವಕರ ದೇಶ. ಭಾರತೀಯ ಯುವಕರು ಈಗ ಕ್ರೀಡೆಯಲ್ಲಿ ವಿಶ್ವದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ. ಆದರೆ ಭಾರತೀಯ ಹಿರಿಯ ನಾಗರಿಕರು ಕೂಡ ಯುವಕರಿಗಿಂತ ಕಡಿಮೆಯಿಲ್ಲ. ಇತ್ತೀಚೆಗಷ್ಟೇ ಹರಿಯಾಣ ಮೂಲದ ಭಗವಾನಿ ದೇವಿ ತಮ್ಮ 94ನೇ ವಯಸ್ಸಿನಲ್ಲಿ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮತ್ತು ಕಂಚು ಗೆಲ್ಲುವ ಮೂಲಕ ಜಗತ್ತಿಗೆ ಸ್ಫೂರ್ತಿಯಾಗುತ್ತಿದ್ದಾರೆ.
ಫಿನ್ಲ್ಯಾಂಡ್ನ ಟಂಪರೆಯಲ್ಲಿ ನಡೆದ 100 ಮೀಟರ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಭಗವಾನಿ ಕೇವಲ 24.74 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಅಷ್ಟೇ ಅಲ್ಲ, ಶಾಟ್ಪುಟ್ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಭಗವಾನಿ ಅವರ ಈ ಸಾಧನೆಗೆ ಕ್ರೀಡಾ ಮತ್ತು ಯುವಜನ ಸಚಿವಾಲಯವು ಅವರ ಚಿತ್ರದೊಂದಿಗೆ ಅಭಿನಂದನಾ ಸಂದೇಶವನ್ನು ಬರೆದಿದೆ. ಸಚಿವಾಲಯವು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಬರೆದುಕೊಂಡಿದೆ – 94 ವರ್ಷದ ಭಾರತದ ಭಗವಾನ್ ದೇವಿ ವಯಸ್ಸು ಅಡ್ಡಿಯಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಅವರು 100 ಮೀ ಓಟದಲ್ಲಿ 24.74 ಸೆಕೆಂಡ್ಗಳಲ್ಲಿ ಚಿನ್ನ ಮತ್ತು ಶಾಟ್ಪುಟ್ನಲ್ಲಿ ಕಂಚಿನ ಪದಕ ಗೆದ್ದರು.