ಉತ್ತರಪ್ರದೇಶದಲ್ಲಿ “ಭೈರವ”ನ ಮುಹೂರ್ತ

1 min read

ಉತ್ತರಪ್ರದೇಶದಲ್ಲಿ “ಭೈರವ”ನ ಮುಹೂರ್ತ

ಸುಗ್ಗಿ ಹಬ್ಬದಂದು ಚಿತ್ರೀಕರಣಕ್ಕೆ ಚಾಲನೆ.

“ಭೈರವ” ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು.

 ಸುಗ್ಗಿ ಹಬ್ಬದ ಸುಸಂದರ್ಭದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ ಗೋವಿಂದ ಪುರದ ಹನುಮಂತನ ಸನ್ನಿಧಿಯಲ್ಲಿ ನೆರವೇರಿದೆ.

ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ  ಕುಲಕರ್ಣಿ ಆರಂಭ ಫಲಕ ತೋರಿದರು.  ವೈಭವ್ ಬಜಾಜ್ ಹಾಗೂ ಹನಿ‌ ಚೌಧರಿ  (ವಿಸಿಕಾ ಫಿಲಂ ಸಂಸ್ಥೆ) ಸೇರಿ ಕ್ಯಾಮೆರಾ ಚಾಲನೆ‌ ಮಾಡಿದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡರಾದ ಡಾ||ಮಂಜು ಶಿವಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಮರೊಟ್ಟು ಚೆಕ್ ಪೋಸ್ಟ್  ಖ್ಯಾತಿಯ  ಸನತ್ ಈ ಚಿತ್ರದ ನಾಯಕ. ನಾಯಕಿಯಾಗಿ ಒಂದು ಮೊಟ್ಟೆ ಖ್ಯಾತಿಯ ಶೈಲಶ್ರೀ ಮುಲ್ಕಿ ಹಾಗೂ ಖಳನಾಯಕನಾಗಿ ಉಮೇಶ ಸಕ್ಕರೆನಾಡು ಅಭಿನಯಿಸುತ್ತಿದ್ದಾರೆ.

ಸಂದೀಪ್ ಫ್ರೇಡ್ರಿಕ್ ಛಾಯಾಗ್ರಹಣ,   ಕಪಿಲ್ ದೀಕ್ಷಿತ್ ಕ್ರಿಯಾಶೀಲ ನಿರ್ದೇಶನ ಹಾಗೂ ಕರಣ್ ಕ್ಷಿತಿ ಸುವರ್ಣ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರತಂಡದ ಸದಸ್ಯರು ಹಾಗೂ ಮೀರತ್ ನಗರದ ಖ್ಯಾತ ವಕೀಲರಾದ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd