ಟ್ರೇಲರ್ ಗೂ ಮುಂಚೆಯೇ ಧೂಳೆಬ್ಬಿಸುತ್ತಿದೆ ಭಜರಂಗಿ 2ನ ಪೋಸ್ಟರ್..!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಇದೇ ತಿಂಗಳು ಅಂದ್ರೆ ಅಕ್ಟೋಬರ್ 29 ರಂದು ಥಿಯೇಟರ್ ಗಳಿಗೆ ಲಗ್ಗೆ ಇಡಲಿದ್ದು, ಶಿವಣ್ಣನ ಅಭಿಮಾನಿಗಳು ಕಾರತರದಿಂದ ಕಾಯ್ತಿದ್ದಾರೆ. ಈ ನಡುವೆ ಚಿತ್ರದ ಟ್ರೇಲರ್ ಅಕ್ಟೋಬರ್ 20 ಅಂದ್ರೆ ನಾಳೆ ಟ್ರೇಲರ್ ರಿಲೀಸ್ ಆಗಲಿದೆ. ಆದ್ರೆ ಅಷ್ಟರೊಳಗೆ ಸಿನಿಮಾ ತಂಡ ಅ ಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ಸಿನಿಮಾದ ಮತ್ತೋರ್ವ ಖಳನಟನ ಪೋಸ್ಟರ್ ರಿಲೀಸ್ ಮಾಡಿದೆ. “ಆರಕ ದ ಡೀಮನ್” ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ಸಿನಿಮಾದ ರಾಕ್ಷಸ ಈತ ಎಂಬುದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.
ಹೌದು ಈ ಹಿಂದೆ ಹಿರಿಯ ನಟಿ ಶ್ರುತಿ ಹಾಗೂ ಲೋಕಿ ಪೋಸ್ಟರ್ ಗಳನ್ನು ಭಜರಂಗಿ 2 ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಮತ್ತೋರ್ವ ಖಳನಟ ಚೆಲುವರಾಜು ಅವರ ಪೋಸ್ಟರ್ ಹೊರಬಂದಿದ್ದು, ವಿಭಿನ್ನ ಹಾಗೂ ಡೇರಿಂಗ್ ಲುಕ್ ನಲ್ಲಿ ವಿಲ್ಲನ್ ದರ್ಶನ ಮಾಡಿಸಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ ಚಿತ್ರತಂಡ. ಸೂಪರ್ ನ್ಯಾಚುರಲ್ ಅಂಶಗಳನ್ನು ಹೊಂದಿರುವ ಈ ಸಿನಿಮಾದ ಒಂದು ಸಣ್ಣ ರೋಮಾಂಚನಕಾರಿ ಝಲಕ್ ಅನ್ನ ಟ್ರೇಲರ್ ಮೂಲಕ ಅಭಿಮಾನಿಗಳಿಗೆ ತೋರಿಸೋದಕ್ಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ. ಅದಕ್ಕೂ ಮುನ್ನ ಈ ಚಿತ್ರದ ವಿಲನ್ ಆರಕ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ.
ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ‘ಭಜರಂಗಿ 2’ ನಿರ್ಮಾಣ ಆಗಿದೆ. ಶಿವರಾಜ್ ಕುಮಾರ್ ಗೆ ನಿರ್ದೇಶಕ ಎ. ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಪೋಸ್ಟರ್ಗಳು ಭಾರಿ ಹೈಪ್ ಸೃಷ್ಟಿಸಿವೆ. ಪೋಸ್ಟರ್ ಗಳೇ ಈ ರೀತಿ ಅಬ್ಬರಿಸುತ್ತಿದೆ. ಇನ್ನೂ ಟ್ರೇಲರ್ ಯಾವ ರೇಂಜ್ ಗೆ ಇರಬಹುದು ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.