ಭಜರಂಗಿ 2 ರಿಲೀಸ್ ದಿನಾಂಕ ಘೋಷಣೆ..? ಟ್ರೇಲರ್ ರಿಲೀಸ್ ಗೆ ರೆಡಿ..!
ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಭಜರಂಗಿ 2 ಸಿನಿಮಾ ಟೀಸರ್ ಹಾಗೂ ಪೋಸ್ಟರ್ ಗಳಿಂದ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಿದ್ದು, ಅವರೆಲ್ಲರಿಗೂ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.. ಸಿನಿಮಾದ ರಿಲೀಸ್ ಡೆಟ್ ಕೊನೆಗೂ ರಿವೀಲ್ ಆಗಿದೆ.. ಭಜರಂಗಿ 2 ಸಿನಿಮಾವು ಸೆಪ್ಟೆಂಬರ್ 10 ರಂದು ಅಂದ್ರೆ ಗಣೇಶ ಚತುರ್ಥಿಗೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು, ಸಿನಿಮಾವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿಯೇ ನೋಡಿ ಹರಿಸಿರಿ ಎಂದು ಮನವಿ ಮಾಡಿದ್ದಾರೆ.
ಇನ್ನೂ ವಿಶೇಷ ಅಂದ್ರೆ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಗೆ ರೆಡಿಯಾಗಿದೆ ಎನ್ನಲಾಗ್ತಾಯಿದೆ.. ಹೌದು ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.. ಈ ನಡುವೆ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಅನ್ನೋ ವಿಚಾರ ಹರಿದಾಡ್ತಿದ್ದು, ಅಭಿಮಾನಿಗಳ ಖುಷಿ ಹೆಚ್ಚಿಸಿದೆ.. ಅಂದ್ಹಾಗೆ ಭಜರಂಗಿ2 ನಂತರ ಶಿವಣ್ಣ ಇನ್ನೂ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಲಿದ್ದಾರೆ. ಪ್ರಮುಖವಾಗಿ ಹರ್ಷ ಅವರ ನಿರ್ದೇಶನದಲ್ಲೇ ಮೂಡಿಬರಲಿರುವ ಹೊಸ ಸಿನಿಮಾ ವೇದದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ.








