OTT ಯಲ್ಲಿ ಹೊಸ ದಾಖಲೆ ಬರೆದ ಭಜರೇ ಭಜರಂಗಿ-2: ಜಗಮೆಚ್ಚಿದ ನಾಯಕ ಶಿವಣ್ಣನಿಗೆ ಉಘೇ ಎಂದ ಪ್ರೇಕ್ಷಕ..!
ಕನ್ನಡ ಚಿತ್ರಪ್ರೇಮಿಗಳು ಎಂದಿಗೂ ಒಳ್ಳೆ ಸಿನಿಮಾ ಕೈ ಬಿಡೋದಿಲ್ಲ ಅನ್ನೋದಕ್ಕೆ ಪದೇ ಪದೇ ಪ್ರೋವ್ ಆಗ್ತಿದೆ. ಇದಕ್ಕೆ ತಾಜ ಉದಾರಹಣೆ ಶಿವಣ್ಣನ ಭಜರೇ ಭಜರಂಗಿ-2 ಸಿನಿಮಾ ಸೃಷ್ಟಿಸ್ತಿರುವ ಸಂಚಲನ. ಹೌದು, ಹ್ಯಾಟ್ರಿಕ್ ಹೀರೋ ಶಿವವರಾಜ್ ಕುಮಾರ್ ನಟನೆಯ ಭಜರಂಗಿ-2 ಸಿನಿಮಾ ಬಿಡುಗಡೆಗೂ ಮುನ್ನವೇ ಬೇಜಾನ್ ಟಾಕ್ ಕ್ರಿಯೇಟ್ ಮಾಡಿತ್ತು. ಅಕ್ಟೋಬರ್ 29ರಂದು ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಭಜರಂಗಿ-2ಯನ್ನು ಅಭಿಮಾನಿಗಳು ಅದ್ಧೂರಿಯಿಂದ ಸ್ವಾಗತಿಸಿದರು. ಆದ್ರೆ ಅದೇ ದಿನ ಪುನೀತ್ ನಿಧನದ ಸುದ್ದಿ ಬರಸಿಡಿಲಿನಂತೆ ಚಿತ್ರರಂಗಕ್ಕೆ ಎರಗಿತ್ತು. ಹೀಗಾಗಿ ಕೆಲ ದಿನ ಚಿತ್ರದ ಪ್ರದರ್ಶನ ನಿಲ್ಲಿಸಲಾಗಿತ್ತು. ಕೆಲ ದಿನದ ನಂತರ ಮತ್ತೆ ಬಿಡುಗಡೆಯಾದ ಭಜರಂಗಿ-2ಗೆ ಅಷ್ಟಾಗಿ ರೆಸ್ಪಾನ್ಸ್ ಸಿಗಲಿಲ್ಲ. ಆದರೆ ಕನ್ನಡ ಚಿತ್ರಪ್ರೇಮಿಗಳು ಒಳ್ಳೆಯ ಚಿತ್ರವನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಡಿಸೆಂಬರ್ 23ರಿಂದ ‘ಭಜರಂಗಿ 2’ ಚಿತ್ರವನ್ನು ಜೀ5 ಓಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಭಜರಂಗಿ2 ಒಟಿಟಿಗೆ ಬಿಡುಗಡೆಯಾಗಿ ಮೂರೇ ದಿನದಲ್ಲಿ ಹಳೆಯ ರೆಕಾರ್ಡ್ ಗಳನ್ನು ಪೀಸ್ ಪೀಸ್ ಮಾಡಿ, ಒಟಿಟಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮಗಳು ಸಾರಾ ಚಿತ್ರ ನೊಡಿ ಕಣ್ಣೀರು ಹಾಕಿದ ಸೈಪ್, ಅಮೃತಾ…..
ಜೀ5ನಲ್ಲಿ ತೆರೆಕಂಡಿರುವ ‘ಭಜರಂಗಿ 2’ ಬಿಡುಗಡೆಯಾದ ಕೇವಲ ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಪಡೆದಿದೆ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಇದಾಗಿದ್ದು ಎಂಬ ಕೀರ್ತಿಗೆ ಭಜರಂಗಿ-2 ಸಿನಿಮಾ ಪಾತ್ರವಾಗಿದೆ.
ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಭಜರಂಗಿ-2ಗೆ ಎ ಹರ್ಷ ಆಕ್ಷನ್ ಕಟ್ ಹೇಳಿದ್ದು, ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಿದ್ದರು. ಭಜರಂಗಿ ಲೋಕಿ , ಶ್ರುತಿ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಅನೇಕ ತಾರಾಬಳಗ ಸಿನಿಮಾದಲ್ಲಿತ್ತು. ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮ್ಯೂಸಿಕ್ ಮಾಂತ್ರಿ ಎ ಅರ್ಜುನ್ ಜನ್ಯ ಮ್ಯೂಸಿಕ್ ಸಿನಿಮಾಗಿತ್ತು.