ಕೆಕೆಆರ್ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಬೌಲರ್

1 min read
bharat-arun-new bowling-coach for kkr saaksha tv

ಕೆಕೆಆರ್ ಬೌಲಿಂಗ್ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಬೌಲರ್

ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಕೈಲ್ ಮಿಲ್ಸ್ ಬದಲಿಗೆ ಕೆಕೆಆರ್  ತಂಡದ ಬೌಲಿಂಗ್ ಕೋಚ್ ಆಗಿ ಅರುಣ್ ಅವರನ್ನು ಆಯ್ಕೆ ಮಾಡಿದೆ ಎಂದು ಫ್ರಾಂಚೈಸಿ ಸಿಇಒ ವೆಂಕಿ ಮೈಸೂರ್ ತಿಳಿಸಿದ್ದಾರೆ.

 ಅರುಣ್ ಅವರ ಆಯ್ಕೆ ತಕ್ಷಣವೇ ಜಾರಿಗೆ ಬರಲಿದೆ ಎಂದು ವೆಂಕಿ ಹೇಳಿದ್ದಾರೆ. ಅರುಣ್ ಅವರ ನೇಮಕಾತಿಯನ್ನು ಕೆಕೆಆರ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಸ್ವಾಗತಿಸಿದ್ದಾರೆ.

 ರವಿಶಾಸ್ತ್ರಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿದ್ದರು.

bharat-arun-new bowling-coach for kkr  saaksha tv

ಇವರ ಅವಧಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಯಿತು.

ಯುವ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರಿಗೆ ಅರುಣ್ ತರಬೇತಿ ನೀಡಿದ್ದಾರೆ.

59 ವರ್ಷದ ಅರುಣ್ ಟೀಂ ಇಂಡಿಯಾ ಪರ ಎರಡು ಟೆಸ್ಟ್ ಹಾಗೂ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಐಪಿಎಲ್ 2022 ಕ್ಕಾಗಿ ಕೆಕೆಆರ್ ವಿಂಡೀಸ್ ಫೈಟರ್ ಆಂಡ್ರೆ ರಸೆಲ್, ಟೀಮ್ ಇಂಡಿಯಾದ ಯುವ ಆಟಗಾರ ವೆಂಕಟೇಶ್ ಅಯ್ಯರ್, ವಿಂಡೀಸ್‌ನ ಆಲ್‌ರೌಂಡರ್ ಸುನಿಲ್ ನರೈನ್ ಮತ್ತು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ರಿಟೈನ್ಡ್ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd