ನಾಳೆ ಭಾರತ್ ಬಂದ್ : ಪದವಿ ಪರೀಕ್ಷೆ ಮುಂದೂಡಿಕೆ Bharat Bandh saaksha tv
ಬೆಂಗಳೂರು : ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿ ನಾಳೆ ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆಕೊಟ್ಟಿವೆ.
ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ತೃತೀಯ ಬಿಎಸ್ಸಿ/ ಬಿಸಿಎ ಆರನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಇನ್ನು ನಾಳೆ ನಡೆಯಬೇಕಿದ್ದ ತೃತೀಯ ಬಿಎಸ್ಸಿ/ ಬಿಸಿಎ ಆರನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ಸೆಪ್ಟೆಂಬರ್ 30ರ ಗುರುವಾರ ನಡೆಯಲಿವೆ.
ಇದಲ್ಲದೇ ನಾಳೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯೂ ಇದ್ದು. ಅದು ನಿಗದಿಯಂತೆ ನಡೆಯಲಿದೆ ಎಂದು ನೃಪತುಂಗ ವಿಶ್ವವಿದ್ಯಾಲಯ ತಿಳಿಸಿದೆ.