Bharat Jodo Yatra – ಮೊದಲ ಭಾರಿಗೆ ಯಾತ್ರೆಯಲ್ಲಿ ಪಾಲ್ಗೊಂಡ ಪ್ರಿಯಾಂಕ ಗಾಂಧಿ…
ಭಾರತ್ ಜೋಡೋ ಯಾತ್ರೆ ಶರುವಾದಾಗಿನಿಂದ ಇದೇ ಮೊದಲ ಭಾರಿಗೆ ಪ್ರಿಯಾಂಕಾ ಗಾಂಧಿ ರಾಹುಲ್ ಗಾಂಧಿ ಅವರೊಂದಿಗೆ ಜೊತೆಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಇಂದು ಶುರುವಾದ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಕುಟುಂಬ ಸದಸ್ಯರು ಅವರ ಸಹೋದರ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಯಾತ್ರೆ ಕಾಶ್ಮೀರವನ್ನ ತಲುಪಲಿದ್ದು, ಸಧ್ಯಕ್ಕೆ ಮಧ್ಯ ಪ್ರದೇಶಕ್ಕೆ ಕಾಲಿಟ್ಟಿದೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿರುವ ಪೊಟೋ ವಿಡಿಯೋಗಳು ಇವತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಹಾರಾಷ್ಟ್ರದ ಪಾದಯಾತ್ರೆ ಮುಗಿಸಿ ಬುಧವಾರ ಮಧ್ಯಪ್ರದೇಶ ಪ್ರವೇಶಿಸಿದ ಯಾತ್ರೆ ಮಧ್ಯಪ್ರದೇಶದಲ್ಲಿ 380 ಕಿಲೋಮೀಟರ್ ಕ್ರಮಿಸಿ ರಾಜಸ್ಥಾನಕ್ಕೆ ತೆರಳಲಿದೆ.
Bharat Jodo Yatra – Priyanka Gandhi participated in the first Bharat Jodo Yatra…