Bharat Jodo Yatre | ಭಾರತ್ ಜೋಡೋ ಪುನಾರಂಭ : ರಾಹುಲ್ ಜೊತೆ ಸೋನಿಯಾ ಹೆಜ್ಜೆ
ಮಂಡ್ಯ : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವಿರಾಮದ ಬಳಿಕ ಮತ್ತೆ ಇಂದಿನಿಂದ ಆರಂಭವಾಗಲಿದೆ.
ಇವತ್ತು ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಸಹ ಹೆಜ್ಜೆ ಹಾಕಲಿದ್ದಾರೆ.
ಮಂಡ್ಯದ ಪಾಂಡವಪುರದ ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ.

11 ಗಂಟೆಗೆ ನಾಗಮಂಗಲದ ಚೌಡೇನಹಳ್ಳಿ ಬಳಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಪಾದಯಾತ್ರೆ ಮುಂದೆ ಸಾಗಲಿದೆ.
ಸಂಜೆ ಏಳು ಗಂಟೆಗೆ ಮಂಡ್ಯದ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಮಾಡಲಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ದೆಹಲಿಯಿಂದ ಸೋನಿಯಾ ಗಾಂಧಿ ಕಬಿನಿಯ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದರು.
ರಾಹುಲ್ ಗಾಂಧಿ ಜೊತೆ ಎಐಸಿಸಿ ಅಧ್ಯಕ್ಷಗಿರಿಯ ಚುನಾವಣೆ ಬಗ್ಗೆ ಸೋನಿಯಾ ಗಾಂಧಿ ಚರ್ಚೆ ನಡೆಸಿದರು.