ಡ್ರಗ್ ಪ್ರಕರಣ : ಡ್ರಗ್ಸ್ ಸೇವನೆ ಒಪ್ಪಿಕೊಂಡ ಭಾರತಿ ಸಿಂಗ್
ಮುಂಬೈ : ಡ್ರಗ್ ಪ್ರಕರಣದಲ್ಲಿ ನಿನ್ನೆ ಎನ್ ಸಿಬಿಯಿಂದ ಬಂಧನಕ್ಕೊಳಗಾಗಿರುವ ಖ್ಯಾತ ಹಾಸ್ಯ ಕಲಾವಿದೆ, ನಿರೂಪಕಿ ಭಾರತಿ ಸಿಂಗ್ ಮತ್ತು ಪತಿ ಹರ್ಷ ಲಿಂಬಾಚಿಯಾ ತಾವು ಡ್ರಗ್ಸ್ ಸೇವನೆ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಬೆಳ್ಳಂ ಬೆಳಿಗ್ಗೆ ಭಾರತಿ ಸಿಂಗ್ ಗೆ ಎನ್ ಸಿಬಿ ಅಧಿಕಾರಿಗಳು ಶಾಕ್ ನೀಡಿದ್ದರು. ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ಈ ಬಗ್ಗೆ ವಿಚಾರಣೆಗಾಗಿ ದಂಪತಿಯನ್ನ ಎನ್ ಸಿಬಿ ಕಚೇರಿಗೆ ಕರೆತರಲಾಗಿತ್ತು.
15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು.
ನವೆಂಬರ್ 21ರಂದು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು.
ಟಾಲಿವುಡ್ ನಲ್ಲಿ `ಸಿಂಹ’ ಘರ್ಜನೆ : ವಸಿಷ್ಠರ ಚೊಚ್ಚಲ ತೆಲುಗು ಸಿನಿಮಾ
ಈ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದು, ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿವಾಸದ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ 86.5 ಗ್ರಾಂ ಗಾಂಜಾ ಪತ್ತೆಯಾಗಿತ್ತು.
ಇನ್ನು ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಬಾಲಿವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣ ಬೆಳಕಿಗೆ ಬಂದಿತ್ತು.
ಇದೀಗ ಈ ಪ್ರಕರಣದ ಸಂಬಂಧ ಅನೇಕ ದೊಡ್ಡ ಡೊಡ್ಡ ಸ್ಟಾರ್ ಗಳನ್ನ ವಿಚಾರಣೆ ನಡೆಸಲಾಗಿದೆ.
ದೀಪಿಕಾ ಪಡುಕೋಣೆ, ರಕುಲ್ ಪ್ರೀತ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸಹ ಇದರಿಂದ ಹೊರತಾಗಿಲ್ಲ.
ಸ್ಯಾಂಡಲ್ ವುಡ್ ಶೀಘ್ರವೇ ಕಾಲಿಡಲಿದ್ದಾನೆ “ಮುಖವಾಡ ಇಲ್ಲದವನು”..!
ಪ್ರಕರಣದಲ್ಲಿ ಹಲವರ ಬಂಧನವೂ ಆಗಿದೆ. ನಟ ಅರ್ಜುನ್ ರಾಮ್‍ಪಾಲ್ ಹಾಗೂ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಮನೆಯ ಮೇಲೂ ದಾಳಿ ನಡೆದಿತ್ತು.
ಅಲ್ಲದೇ ಅರ್ಜುನ್ ರಾಮ್‍ಪಾಲ್ ಗೆಳತಿಯ ಸಹೋದರನನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತಿ ಕಾಮಿಡಿ ಸರ್ಕಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಹಲವು ವರ್ಷ ಕಾಮಿಡಿ ಶೋ ನಡೆಸಿದ್ದರು.
ಪ್ರಸ್ತುತ ಭಾರತಿ ಮತ್ತು ಆಕೆಯ ಪತಿ ‘ಗ್ರೇಟ್ ಇಂಡಿಯನ್ ಡಾನ್ಸರ್’ ಶೋ ನಿರೂಪಿಸುತ್ತಾರೆ.
ಭಾರತಿ ಕಪಿಲ್ ಶರ್ಮಾ ಶೋ ನ ಭಾಗವೂ ಆಗಿದ್ದಾರೆ. ಭಾರತಿ ಸಿಂಗ್ ಕನ್ನಡದ ‘ರಂಗನ್ ಸ್ಟೈಲ್’ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel