sandalwood
ಸ್ಯಾಂಡಲ್ ವುಡ್ ಶೀಘ್ರವೇ ಕಾಲಿಡಲಿದ್ದಾನೆ “ಮುಖವಾಡ ಇಲ್ಲದವನು”..!
ಸ್ಯಾಂಡಲ್ ವುಡ್ ನಲ್ಲಿ ಚೊಚ್ಚಲ ಸಿನಿಮಾವೊಂದು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿದ್ದು, ರಿಲೀಸ್ ಹೊಸ್ತಿಲಲ್ಲಿದೆ. ಓಂ ನಮಃ ಶಿವಾಯ ಮೂವೀಸ್ ನ ಬ್ಯಾನರ್ ನ ಡಿ ಮೂಡಿಬರುತ್ತಿರುವ “ಮುಖವಾಡ ಇಲ್ಲದವನು 84” ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ವಿಡಿಯೋ ಹಾಡುಗಳು ಹಾಗೂ ಟ್ರೇಲರ್ , ಡೈಲಾಗ್ ಪ್ರೋಮೋ ರಿಲೀಸ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗಗರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾ ಸದ್ಯ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.
ಅಂದ್ಹಾಗೆ ವಿ ಹೆಚ್ ಶಿವಕುಮಾರ್ ಅವರು ಚಿತ್ರಕ್ಕೆ ಆಕ್ಷನ್ ಹೇಳಿದ್ದು, ಗಣಪತಿ ನಾಗಪ್ಪ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಶಿವಕುಮಾರ್ ನಾಯಕನಾಗಿದ್ರೆ, ರಚನಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಖವಾಡ ಇಲ್ಲದವನು 84 ಸಿನಿಮಾದ ಹೆಸರೇ ವಿಭಿನ್ನವಾಗಿದೆ. ಈ ಸಿನಿಮಾದಿಂದ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಸಿಗಲಿದೆ. ಸಮಾಜದಲ್ಲಿ ನಡೆಯುವ ನೈ ಘಟನೆಗಳ ಆಧಾರಿತ ಸಿನಿಮಾವಾಗಿದ್ದು, ಒಬ್ಬ ಮುನುಷ್ಯನ ನಾನಾ ರೂಪಗಳು, ಒಳಿತು, ಕೆಡುತು ಈ ಎಲ್ಲದರ ಆಧಾರದಲ್ಲಿ ಕಥೆ ಸುತ್ತಲಿದೆ. ಸಸ್ಪೆನ್ಸ್ , ಮನರಂಜನೆ, ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಕಂಪ್ಲೀಟ್ ಪ್ಯಾಕೇಜ್ ಈ ಸಿನಿಮಾ.. ಅಂದ್ಹಾಗೆ ದುರ್ಗಾ ಪ್ರಸಾದ್ ಸಂಗೀತ ಚಿತ್ರಕ್ಕಿದ್ದು, ಸಿಎನ್ ಪಾಟೀಲ್, ಜಯಸೂರ್ಯ, ಕಾವ್ಯಾ ಗೌಡ, ಅನುಶ್ರೀ ಸೇರಿದಂತೆ ಅನೇಕರ ತಾರಾಬಳಗ ಚಿತ್ರಕ್ಕಿದೆ. ಶೀಘ್ರವೇ ಚಿತ್ರ ಬೆಳ್ಳಿತೆರೆಗಪ್ಪಳಿಸಲಿದೆ.
sandalwood
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








