ಜೈಪುರ: ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ರಾಜಸ್ಥಾನದ ಭಾವನಾ ಜಾಟ್ ಅವರು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ. 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಭಾವನಾ ಜಾಟ್ 1 ತಾಸು 29.54 ನಿಮಿಷಗಳಲ್ಲಿ ಗುರಿಯನ್ನು ತಲುಪಿದ್ದು, ವೈಯಕ್ತಿಕವಾಗಿ ಶ್ರೇಷ್ಠ ಸಾಧನೆಯನ್ನೂ ದಾಖಲಿಸಿದ್ದಾರೆ. ರೇಸ್ ವಾಕಿಂಗ್ ನಲ್ಲಿ ಒಲಂಪಿಕ್ ಅರ್ಹತೆಗೆ 1 ತಾಸು 31 ನಿಮಿಷಗಳ ಗುರಿ ನಿಗದಿಪಡಿಸಲಾಗಿತ್ತು. ಕಳೆದ ವರ್ಷ ಭಾವನ ಅವರು 1 ತಾಸು 38.30 ನಿಮಿಷಗಳಲ್ಲಿ ಗುರಿ ತಲುಪಿದ್ದರು.
ದಾಖಲೆ ಸಂತಸ ತಂದಿದೆ: ಜಾಟ್
ರಾಜಸ್ಥಾನದ ಕಬ್ರಾ ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿರುವ ಭಾವನಾ ಅವರ ಸಾಧನೆಗೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಾಧನೆಯ ಬಗ್ಗೆ ಭಾವನ ಮಾತನಾಡಿದ್ದು, ದಾಖಲೆ ನಿರ್ಮಿಸುವುದು ಸಂತಸ ಉಂಟುಮಾಡಿದೆ. ಇದಕ್ಕಾಗಿ 3-4 ತಿಂಗಳು ಶ್ರಮ ಪಟ್ಟಿದ್ದೇನೆ. ದಾಖಲೆ ಮುರಿದು ಅರ್ಹತೆ ಪಡೆಯುತ್ತೇನೆ ಎಂಬ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...