bheemasena nalamaharaja
ಚಂದನವನದ ಬಹುನಿರೀಕ್ಷಿತ ಹಾಗೂ ವಿಭಿನ್ನ ಸಿನಿಮಾವಾದ ಭೀಮಸೇನ ನಳಮಹಾರಾಜದ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷೆಕರ ಗಮನ ಸೆಳೆಯುತ್ತಿದೆ. ಟೀಸರ್ ಗೆ ಸಿನಿಪ್ರಿಯರು ನೆಟ್ಟಿಗರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ಚಿತ್ರ ಬಿಡುಗಡೆಗೆ ಕಾದುಕುಳಿತಿರುವ ಅಭಿಮಾನಿಗಳ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ ಈ ಸಿನಿಮಾದ ಟೀಸರ್. ನಾಲ್ಕು ವರ್ಷಗಳ ಬಳಿಕ ಅರವಿಂದ್ ಅಯ್ಯರ್ ಅವರು ಅಭಿಮಾನಿಗಳನ್ನ ರಂಜಿಸಲು ನಳಮಹಾರಾಜನ ಮೂಲಕ ಬರುತ್ತಿರೋದು ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಾಗಿಸಿದೆ. ಅರವಿಂದ್ ಅಯ್ಯರ್ ಅವರು ವಿಭಿನ್ನ ಗೆಟಪ್ ನಲ್ಲಿ ಪ್ರೇಕ್ಷಕರನ್ನ ರಂಜಿಸಲು ಬರುತ್ತಿದ್ದು, ಸಿನಿಮಾ ರಿಲೀಸ್ ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದೇ ತಿಂಗಳು ಅಂದ್ರೆ ಅಕ್ಟೋಬರ್ 29ರಂದು ಅಮೇಜಾನ್ ಪ್ರೈಮ್ ನಲ್ಲಿ ಇಡೀ ವಿಶ್ಯಾದ್ಯಂತ ಸಿನಿಮಾ ತೆರೆಕಾಣ್ತಿದೆ. ಈ ಚಿತ್ರ ಒಂದು ವಿಭಿನ್ನ ಕಥಾಹಂದರ ಹೊಂದಿದೆ. ಚಿತ್ರದಲ್ಲಿ ಕಾರ್ತಿಕ್ ಸರಗೂರ್ ನಿರ್ದೇಶಿಸಿರುವ ಈ ಚಿತ್ರದ ತಾರಾಗಣದಲ್ಲಿ ತಾರೆಯರಾದ ಅರವಿಂದ್ ಐಯರ್, ಆರೋಹಿ ನಾರಾಯಣ್, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್ ಮತ್ತು ಆದ್ಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡದ ಕೌಟುಂಬಿಕ ಮನೋರಂಜನೆ ಭೀಮಸೇನ ನಳಮಹರಾಜ ದ ನೇರ ಪ್ರಸಾರದ ಜಾಗತಿಕ ಪ್ರಥಮ ಪ್ರದರ್ಶನದ ವೀಕ್ಷಣೆಯನ್ನು ಅಕ್ಟೋಬರ್ 29 ರಿಂದ ಪ್ರತ್ಯೇಕವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮಾಡಬಹುದು.

ಕಾರ್ತಿಕ್ ಸರಗೂರ್ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಿಸಿದ್ದಾರೆ. ಒಂದು ಭಕ್ಷ್ಯವು ಅದರ ಸಂಪೂರ್ಣ ಸ್ವರೂಪಕ್ಕೆ ಬರಲು ವಿವಿಧ ಪದಾರ್ಥಗಳ ಸಂಯೋಜನೆಯನ್ನು ಒಳಗೊಂಡಿರುವಂತೆಯೇ ನಮ್ಮ ಜೀವನದಲ್ಲಿಯೂ ಅನೇಕ ಸ್ನೇಹಿತರು ಮತ್ತು ವೈರಿಗಳು ಕಾಣಸಿಗುತ್ತಾರೆ.
ಉತ್ತಮ ಖಾದ್ಯಕ್ಕಾಗಿ ಸರಿಯಾದ ರೀತಿಯ ಪದಾರ್ಥಗಳನ್ನು ಹೊಂದಿರುವಂತೆ, ಜೀವನದಲ್ಲಿ ಸರಿಯಾದ ಜನರನ್ನು
ತನ್ನ ಸುತ್ತಲೂ ಹೊಂದಿರುವುದು ಅಷ್ಟೇ ಮುಖ್ಯವಾಗಿದೆ. ಎಂಬು ಒಳಾರ್ಥವನ್ನ ಸಿನಿಮಾ ಹೊಂದಿದೆ.
bheemasena nalamaharaja








