ಈ ಶುಕ್ರವಾರ, ಎರಡು ಬಹುನಿರೀಕ್ಷಿತ ಬಾಲಿವುಡ್ ಚಲನಚಿತ್ರಗಳು ಬಿಡುಗಡೆಯಾಗಿವೆ – ಒಂದು ಕಾರ್ತಿಕ್ ಆರ್ಯನ್ ಅವರ ಹಾರರ್ ಕಾಮಿಡಿ ‘ಭೂಲ್ ಭುಲೈಯಾ 2’ ಮತ್ತು ಎರಡನೆಯದ್ದು ಕಂಗನಾ ರನೌತ್ ಅವರ ಆಕ್ಷನ್ ಸಿನಿಮಾ ‘ಧಾಕಡ್’.
ಬಾಲಿವುಡ್ ಬಿಗ್ ಬಜೆಟ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೆಣಗಾಡುತ್ತಿರುವ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ರಣವೀರ್ ಸಿಂಗ್ ಅವರ ‘ಜಯೇಶ್‌ಭಾಯ್ ಜೋರ್ದಾರ್’ ಮತ್ತು ಅಕ್ಷಯ್ ಕುಮಾರ್ ಅವರ ‘ಬಚ್ಚನ್ ಪಾಂಡೆ’ ನಂತಹ ಕೆಲವು ದೊಡ್ಡ ಸ್ಟಾರ್-ಸ್ಟಡ್ಡ್ ಚಲನಚಿತ್ರಗಳ ಬ್ಯಾಕ್-ಟು-ಬ್ಯಾಕ್ ಫ್ಲಾಪ್‌ಗಳಿಗೆ ಸಾಕ್ಷಿಯಾದ ನಂತರ, ಕಾರ್ತಿಕ್ ಆರ್ಯನ್ ಮತ್ತು ಕನಗನ್ ಅವರ ಚಲನಚಿತ್ರದ ಮೇಲೆ ಬಬಾಲಿವುಡ್ ಭರವಸೆ ತುಂಬಾ ಹೆಚ್ಚಾಗಿದೆ.
ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡ್ತಿದೆ.. ಸೌತ್ ಸಿನಿಮಾಗಳಾದ ಪುಷ್ಪ , RRR ಅದ್ರಲ್ಲೂ KGF 2 ಅಬ್ಬರಕ್ಕೆ ನಡುಗಿ ಹೋಗಿದ್ದ ಬಾಲಿವುಡ್ ನ ಮತ್ತೆ ಅಳಿವಿನಂಚಿನಿಂದ ಒಂದಷ್ಟು ಹಿಂದಕ್ಕೆ ಎಳೆದುಕೊಂಡಿದೆ ಭೂಲ್ ಭುಲಯ್ಯ 2 ಸಿನಿಮಾ
KGF 2 ರೀತಿ ಬಾಕ್ಸ್ ಆಫೀಸ್ ಶೇಕ್ ಮಾಡದೇ ಹೋದ್ರು ಇತ್ತೀಚೆಗೆ ಥಿಯೇಟರ್ ಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿರುವ ಬಾಲಿವುಡ್ ಸಿನಿಮಾವಿದು.,.
ಕೆಜಿಎಫ್ 2 ಮುಂದೆ ಹೀರೊಪಂಥಿ, ರನ್ ವೇ ಹೇಳ ಹೆಸರಿಲ್ಲದಂತೆ ಮಾಯವಾಗಿದ್ದವು.. ಜೆರ್ಸಿಯ ನೆನಪೂ ಇಲ್ಲ.. ಆದ್ರೆ ಪ್ರಸ್ತುತ KGF 2 ಅಬ್ಬರ ಕೊಂಚ ತಗ್ಗಿದ್ದು ಮೇ 20 ರಂದು ರಿಲೀಸ್ ಆದ ಭೂಲ್ ಭುಲಯ್ಯ 2 ಸಿನಿಮಾ ಮೊದಲನೇ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಲಿವುಡ್ ನ ಮರ್ಯಾದೆ ಉಳಿಸಿದೆ.
ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಹಾರರ್ ಅಂಡ್ ಕಾಮಿಡಿ ಸಿನಿಮಾ ಪ್ರೇಕ್ಷರನ್ನ ಮೆಚ್ಚಿಸಿದೆ.. ಸಿನಿಮಾ ರಿಲೀಸ್ ಆದ ಮೊದಲ ದಿನವೇ 14.11 ಕೋಟಿ ಗಳಿಸಿತ್ತು.. ವೀಕೆಂಡ್‌ನಲ್ಲಿ 18.34 ಕೋಟಿ ಕಲೆಕ್ಷನ್ ಮಾಡಿದೆ. ಭಾನುವಾರ 23.5 ಕೋಟಿ ರೂ ಕಲೆಕ್ಷನ್ ಮಾಡಿದೆ..
ಅಂದ್ಹಾಗೆ ಇದೇ ಸಿನಿಮಾದ ಸಮಯದಲ್ಲೇ ಕಂಗನಾ ರಣೌತ್ ಅವರ ಬಹುನಿರೀಕ್ಷೆಯ ಧಾಕಡ್ ಸಿನಿಮಾ ಕೂಡ ರಿಲೀಸ್ ಆಗಿದ್ರೂ ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಸಾಬೀತಾಗಿದೆ.. ರಿಲೀಸ್ ಆದ ದಿನ ಸಿನಿಮಾ ಕೇವಲ 1.20 ಕೋಟಿ ಕಲೆಕ್ಷನ್ ಮಾಡಲಷ್ಟೇ ಸಫಲವಾಗಿದೆ..