ರೈಲಿನ ಹಳಿ ಮೇಲೆ ಬಿದ್ದ ಯುವತಿ – ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಯುವಕ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ರೈಲ್ವೆ ಹಳಿ ಮೇಲೆ ಬಿದ್ದ ಮಹಿಳೆಯನ್ನು ರಕ್ಷಿಸಲು 37 ವರ್ಷದ ವ್ಯಕ್ತಿಯೊಬ್ಬರು ಅಸಾಧಾರಣ ಧೈರ್ಯ ಪ್ರದರ್ಶಿಸಿರುವ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಫೆಬ್ರುವರಿ 5 ರಂದು ರಾತ್ರಿ 8 ಗಂಟೆ ಸುಮಾರಿಗೆ ಬರ್ಖೇಡಿಯಲ್ಲಿ ಈ ಘಟನೆ ನಡೆದಿದೆ. ಕಾರ್ಪೆಂಟರ್ ಆಗಿರುವ ಮೊಹಮ್ಮದ್ ಮೆಹಬೂಬ್ ಅವರು ನಮಾಜ್ ಮಾಡಿದ ನಂತರ ಘಟನಾ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿದ್ದರು.
20 ವರ್ಷ ವಯಸ್ಸಿನ ಮಹಿಳೆ ರೈಲ್ವೇ ಹಳಿ ದಾಟುತ್ತಿದ್ದಾಗ ಮಹಿಳೆ ಭಯಭೀತರಾಗಿ ಹಳಿಗಳ ಮೇಲೆ ಮುಗ್ಗರಿಸಿ ಬಿದ್ದಿದ್ದಾಳೆ. ಜನರು ಭಯಭೀತರಾಗಿ ಕೂಗಲು ಪ್ರಾರಂಭಿಸಿದಾಗ, ಮೆಹಬೂಬ್ ಟ್ರ್ಯಾಕ್ ಮೇಲೆ ಹಾರಿ ಮಹಿಳೆನ್ನು ಟ್ರ್ಯಾಕ್ ಬೆಡ್‌ನ ಮಧ್ಯಕ್ಕೆ ಎಳೆದುಕೊಂಡು ರೈಲು ಅವರ ಮೇಲೆ ಹಾದು ಹೋಗುವಾಗ ತಲೆ ಎತ್ತದಂತೆ ತಡೆದಿದ್ದಾರೆ.
https://twitter.com/i/status/1492342255570632709
ರೈಲಿನಲ್ಲಿ ಕನಿಷ್ಠ 28 ವ್ಯಾಗನ್‌ಗಳು ಅವರ ಮೇಲೆ ಹಾದುಹೋಗುವವರೆಗೆ ಜನರು ಇಬ್ಬರೂ ತಲೆ ಮೇಲೆತ್ತದಂತೆ ಎಚ್ಚರಿಕೆ ನೀಡಿದ್ದಾರೆ. ಘಟನೆಯ ವೀಡಿಯೋದಲ್ಲಿ, ಮೆಹಬೂಬ್ ಮಹಿಳೆಯ ತಲೆಯನ್ನು ಕೆಳಕ್ಕೆ ಹಿಡಿದಿರುವುದನ್ನು ನೋಡಬಹುದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗಿನಿಂದ ಮೆಹಬೂಬ್ ಮನೆಗೆ ಜನರು ಆಗಮಿಸಿ ಆತನನ್ನ ಅಭಿನಂದಿಸುತ್ತಿದ್ದಾರೆ..








