Bidar-ಇತ್ತಿಚಿನ ದಿನಮಾನದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ,ನಗರದ ಗಲ್ಲಿಗಳಲ್ಲಿ ರಸ್ತೆಗಳಲ್ಲಿ ಜನಸಾಮಾನ್ಯರು ಮಕ್ಕಲ್ಲೂ ಹಿರಿಯರಿ ಓಡಾಡಿವಿದು ಕಷ್ಟವಾಗಿದೆ .
ಇದಕ್ಕೆ ಸಾಕ್ಷಿಯಂತೆ ಬೀದರ್ ನಲ್ಲಿ 2 ವರ್ಷದ ಮಗುವಿನ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿದ್ದು ಮಗು ಗಂಭೀರವಾಗಿ ಗಾಯಗೊಂಡಿದೆ .
ಈ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಗಾಡವಾನ್ ಗಲ್ಲಿಯಲ್ಲಿ ಜರುಗಿದೆ. ಅಸ್ಮಾ ಸಮೀರ್ ಶೇಕ್ ಅಂಗಡಿಗೆ ಹೋಗುತ್ತಿದ್ದಾಗ ಹುಚ್ಚುನಾಯಿ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗಳಾಗಿವೆ.
ಸ್ಥಳೀಯ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ನಗರದ ಆಸ್ಪತ್ರೆ ಸೇರಿಸಲಾಗಿದೆ.
ದಾಳಿಯಲ್ಲಿ ಮಗುವಿನ ಮುಖಕ್ಕೆ ಹೆಚ್ಚನ ಪ್ರಮಾಣದಲ್ಲಿ ಗಾಯಗಳಾಗಿದ್ದು ಗಾಯಗಳಿಗೆ ವೈದ್ಯರು 32 ಸ್ಟಿಚ್ ಹಾಕಿದ್ದಾರೆ.
ನಗರದ ಹಲವೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.
ನಗರದ ರಸ್ತೆಗಳಲ್ಲಿ ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿವೆ. ಪರಿಣಾಮ ವಾಹನ ಸವಾರರು ಆತಂಕ ಪಡುತ್ತಿದ್ದಾರೆ.