Bidar : ಕದ್ದ ಬೈಕ್ ಮಾರಲು ಬಂದಿದ್ದ ಕಳ್ಳ ಅಂದರ್
ಕದ್ದ ಬೈಕ್ ಮಾರಾಟಕ್ಕೆ ಬಂದಿದ್ದ ಕಳ್ಳನನ್ನ ಪೊಲೀಸರು ೊದ್ದು ಒಳಗೆ ಹಾಕಿರುವ ಘಟನೆ ಬೀದರ್ ನ ಹುಜಮನಾಬಾದ್ ನಲ್ಲಿ ನಡೆದಿದೆ..
ಕಳ್ಳನಿಂದ ಐದು ಲಕ್ಷ ರೂ.ಮೌಲ್ಯದ ಹತ್ತು ಬೈಕ್ ಗಳನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ..
ನೇಮ್ ಪ್ಲೆಟ್ ಇಲ್ಲದ ಬೈಕ್ ಮೇಲೆ ಬೆಳಗಿನ ಜಾವ ನಾಲ್ಕು ಗಂಟೆಗೆ ಬೈಕ್ ಮಾರಾಟ ಮಾಡಲು ಬಂದ್ ಕಳ್ಳನನ್ನ ಹುಮನಾಬಾದ್ ಪಟ್ಟಣದ ಮಾಣಿಕ್ ನಗರ ಗೇಟ್ ಬಳಿ ಪೊಲೀಸರು ಹಿಡಿದಿದ್ದಾರೆ ..
ಬೈಕ್ ಕಳ್ಳನನ್ನ ಶಿವು ಅರ್ಜುನ ನಾಗಣ್ಣೋರ ಎಂದು ಗುರುತಿಸಲಾಗಿದೆ.. ಈತ ಮೊಳಕೇರಾ ಗ್ರಾಮದವನಾಗಿದ್ದಾನೆ..
ಈತನ ವಿರುದ್ಧ ಹತ್ತು ಬೈಕ್ ಕಳ್ಳತನ ಪ್ರಕರಣ ದಾಖಲಾಗಿ ಹಲವು ತಿಂಗಳಾಗಿದ್ದವು..
ಎಸ್ಪಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನ ದಲ್ಲಿ ಹುಮನಾಬಾದ್ ಡಿಎಸ್ಪಿ ಶಿಂವಾಶು ರಜಪೂತ ಹಾಗೂ ಸಿಪಿಐ ಶರಣಬಸಪ್ಪಾ ಕೊಡ್ಲಾ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದೆ..