ಬಿಗ್ ಬಾಸ್ ಕನ್ನಡ ಸೀಸನ್ 8 – ಸ್ಪರ್ಧಿಗಳ ಕ್ವಾರಂಟೈನ್ ಗೆ ಡೇಟ್ ಫಿಕ್ಸ್..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಬಿಗ್ ಬಾಸ್ ಕನ್ನಡ ಸೀಸನ್ 8 ಇನ್ನೇನು ಇದೇ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ. ಕಳೆದ ವರ್ಷವೇ ನಡೆಯಬೇಕಿದ್ದ ಬಿಗ್ ಬಾಸ್ ಕೊರೊನಾ ಕಾರಣದಿಂದ 2021ಕ್ಕೆ ಮುಂದೂಡಲಾಗಿದೆ. ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು, ಪ್ರೇಕ್ಷಕರ ಕಾತರತೆ ಹೆಚ್ಚಿದೆ. ಅದ್ರಂತೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಈ ಸೀಸನ್ ನಲ್ಲಿ ಹಲವಾರು ಬದಲಾವಣೆಗಳೂ ಆಗಲಿವೆ ಎನ್ನಲಾಗ್ತಿದೆ.
ಈ ನಡುವೆ ಫೆಬ್ರವರಿ 28ರಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದೀಗ ಸ್ಪರ್ಧಿಗಳು ಕೊರೊನಾ ನಿಯಮಾವಳಿಗಳನ್ನ ಚೂಚೂ ತಪ್ಪದೇ ಪಾಲಿಸಬೇಕಾಗಿದ್ದು, ಈ ನಿಯಮಗಳಲ್ಲಿ ಕ್ವಾರಂಟೈನ್ ರೂಲ್ಸ್ ಸಹ ಒಂದಾಗಿದೆ. ಹೌದು ಕೊರೊನಾ ನಿಯಮದ ಪ್ರಕಾರ ಸ್ಪರ್ಧಿಗಳನ್ನು ಈ ಬಾರಿ ಬಿಗ್ ಮನೆಯೊಳಗೆ ಕಳುಹಿಸುವ ಮೊದಲು ಕ್ವಾರಂಟೈನ್ ಮಾಡಬೇಕು.
ಜಾತಿನಿಂದನೆ ಆರೋಪ : ಯುವರಾಜ್ ಸಿಂಗ್ ವಿರುದ್ಧ ಎಫ್ ಐಆರ್
ಈಗಾಗಲೇ ಸ್ಪರ್ಧಿಗಳ ಕ್ವಾರಂಟೈನ್ ಗೆ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಯೊಂದು ಸ್ಪರ್ಧಿಗಳನ್ನು ಒಂದೊಂದು ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಂದಹಾಗೆ ಕ್ವಾರಂಟೈನ್ ಪ್ರಕ್ರಿಯೆ ಇದೇ ತಿಂಗಳು 17ರಿಂದ ಪ್ರಾರಂಭವಾಗುತ್ತಿದೆ. 28ರ ವರೆಗೂ ಸ್ಪರ್ಧಿಗಳು ಕ್ವಾರಂಟೈನ್ ನಲ್ಲಿ ಇರಲಿದ್ದು, 28 ರಾತ್ರಿಯಿಂದ ಬಿಗ್ ಬಾಸ್ ಮನೆ ಸೇರಿಕೊಳ್ಳಲಿದ್ದಾರೆ. 28ರಂದು ನಡೆಯುವ ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.
ಇನ್ನೂ ಈ ಬಾರಿ ಬಿಗ್ ಬಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲದ ನಡುವೆ ಅನೇಕರ ಹೆಸರುಗಳು ಸಹ ಕೇಳಿಬರುತ್ತುದೆ. ಕಾಮಿಡಿ ಕಿಲಾಡಿ ನಯನಾ, ನಟಿ ಅನುಷಾ, ರವಿಶಂಕರ್ ಗೌಡ, ತರಂಗ ವಿಶ್ವ, ಸುಮಂತ್ ಸೈಲೇಂದ್ರ, ಬ್ರಹ್ಮಗಂಟು ಖ್ಯಾತಿಯ ನಟಿ ಗೀತಾ ಭಾರತಿ, ಅಗ್ನಿಸಾಕ್ಷಿಯ ಸುಕೃತಾ, ಖ್ಯಾತ ನಿರೂಪಕಿ, ಟಿಕ್ ಟಾಕರ್ಸ್, ಡ್ರೋನ್ ಪ್ರತಾಪ್, ವಿನಯಾ ಪ್ರಸಾದ್ ಹೀಗೆ ಅನೇಕರ ಹೆಸರುಗಳು ಕೇಳಿಬರುತ್ತಿವೆ. ಆದ್ರೆ ಇದೆಲ್ಲದಕ್ಕೂ ಉತ್ತರ ಫೆಬ್ರವರಿ 28ರಂದು ಗ್ರ್ಯಾಂಡ್ ಓಪನಿಂಗ್ ಮೂಲಕವೇ ಸಿಗಲಿದೆ.
‘ಆತ್ಮಹತ್ಯೆಗೆ ಶರಣಾಗ್ತೀನಿ’…! ಟ್ವಿಟ್ಟರ್ ನಲ್ಲಿ ಗಳಗಳನೆ ಅತ್ತ ತಮಿಳು ನಟಿ ಮೀರಾ ಮಿಥುನ್..! – video
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel