ಭಾರತೀಯ ರೈಲ್ವೆ (IRCTC) ತನ್ನ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ.
– ಬುಕ್ಕಿಂಗ್ ಸಮಯ ಬದಲಾವಣೆ: ಹಿಂದೆ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತಿದ್ದ ತತ್ಕಾಲ್ ಟಿಕೆಟ್ ಬುಕ್ಕಿಂಗ್, ಇನ್ಮುಂದೆ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ.
-ಆಧಾರ್ ಕಾರ್ಡ್ ಕಡ್ಡಾಯ: ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗಾಗಿ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ, ಇದು ನಕಲಿ ಗುರುತಿನ ಪ್ರಮಾಣಪತ್ರಗಳನ್ನು ಬಳಸಿಕೊಂಡು ಬುಕಿಂಗ್ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
– ಮರುಪಾವತಿ ನಿಯಮಗಳಲ್ಲಿ ಸಡಿಲಿಕೆ: ಪ್ರಯಾಣಕ್ಕೆ 24 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೂ, ಪ್ರಯಾಣಿಕರು ಈಗ ಹೆಚ್ಚಿನ ಮರುಪಾವತಿ ಪಡೆಯಲು ಸಾಧ್ಯವಾಗುತ್ತದೆ.
ಈ ಬದಲಾವಣೆಗಳು ಪ್ರಯಾಣಿಕರಿಗೆ ರೈಲು ಸೇವೆಗಳನ್ನು ಸುಲಭ ಮತ್ತು ಹೆಚ್ಚು ಹೊಂದಿಕೊಳ್ಳುವಂತೆ ಮಾಡಲು IRCTC ಜಾರಿಗೆ ತಂದಿದೆ.








