ಏರ್ ಇಂಡಿಯಾ ಸರ್ವರ್ಗಳ ಮೇಲೆ ಬಿಗ್ ಸೈಬರ್ ಅಟ್ಯಾಕ್..!
ಏರ್ ಇಂಡಿಯಾ ಮೇಲೆ ಬಿಗ್ ಸೈಬರ್ ಅಟ್ಯಾಕ್..! 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಡೇಟಾ ಲೀಕ್..! ಹೌದು..! ಏರ್ ಇಂಡಿಯಾ ಮೇಲೆ ಸೈಬರ್ ದಾಳಿ ನಡೆದಿದ್ದು, ಬರೋಬ್ಬರಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮತ್ತು ನಿರ್ಣಾಯಕ ಮಾಹಿತಿಯನ್ನು ಕದಿಯಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಏರ್ ಇಂಡಿಯಾದ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು ಪಾಸ್ ಪೋರ್ಟ್ ವಿವರಗಳು ಸೇರಿದಂತೆ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನ ಕದಿಯಲಾಗಿದೆ.
ಇದು 2011 ಆಗಸ್ಟ್ ಮತ್ತು ಫೆಬ್ರವರಿ 2021ರ ನಡುವಿನ ದತ್ತಾಂಶವನ್ನು ಒಳಗೊಂಡಿತ್ತು ಎಂದು ತಿಳಿದುಬಂದಿದೆ.
ಇನ್ನು ಏರ್ ಇಂಡಿಯಾದ ಪ್ರಯಾಣಿಕರ ಸೇವಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆದಿದೆ. ಸೈಬರ್ ಭದ್ರತಾ ದಾಳಿಯು ಲಕ್ಷಾಂತರ ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ಮತ್ತು ಪಾಸ್ ಪೋರ್ಟ್ ವಿವರಗಳು ಸೇರಿದಂತೆ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಕಂಪನಿ ತಿಳಿಸಿದೆ.