BPL ಕಾರ್ಡುದಾರರಿಗೆ ಬಿಗ್ ರಿಲೀಫ್ : ಬೈಕ್, ಟಿವಿ, ಫ್ರಿಡ್ಜ್ ಇದ್ರೂ ರದ್ದಾಗಲ್ಲ ನಿಮ್ಮ ರೇಷನ್ ಕಾರ್ಡ್
ಬೆಂಗಳೂರು: ಇತ್ತೀಚೆಗೆ ಸಚಿವ ಉಮೇಶ್ ಕತ್ತಿ ಅವರು ಬಿಪಿಲ್ ಕಾರ್ಡ್ ಕುರಿತಾಗಿ ನೀಡಿದ್ದ ಹೇಳಿಕೆ ತಲ್ಲಣ ಸೃಷ್ಟಿ ಮಾಡಿತ್ತು. ರಾಜ್ಯ ಸರ್ಕಾರದ ವಿರುದ್ಧ ಬಡ ಮಧ್ಯಮವರ್ಗದ ಜನರು ರೊಚ್ಚಿಗೇಳುವಂತೆ ಮಾಡಿತ್ತು. ಹೌದು ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡೋದಾಗಿ ಬೆಳಗಾವಿಯಲ್ಲಿ ಉಮೇಶ್ ಕತ್ತಿ ಹೇಳಿದ್ದರು.
ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ಇಲ್ಲದಿದ್ದರೆ ಏನಾಗುತ್ತೆ..?
ಆದ್ರೆ ಇದೀಗ ಟಿವಿ, ಫ್ರಿಡ್ಜ್, ವಾಹನಗಳನ್ನು ಹೊಂದಿರುವವರ ಕಾರ್ಡ್ ಗಳನ್ನ ರದ್ದು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್ ಹೊಂದಿದ್ರೆ ಕೂಡಲೇ ಅದನ್ನು ವಾಪಸ್ಸು ನೀಡುವಂತೆ ಹೇಳಿದ್ದರು. ಇದಲ್ಲದೇ ಕೆಲವು ಸರ್ಕಾರಿ ಅಧಿಕಾರಿಗಳು ಕೂಡ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದು ಅವರು ಕೂಡ ಕಾರ್ಡ್ ಅನ್ನು ವಾಪಸ್ಸು ನೀಡುವಂತೆ ಆದೇಶ ಮಾಡಿದ್ದರು. ಸಚಿವರ ಈ ವರ್ತನೆ ವಿರುದ್ಧ ರಾಜಕೀಯ ನಾಯಕರುಗಳು ಸೇರಿದಂತೆ ಅನೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ BPL ಕಾರ್ಡ್ ಸ್ಥಗಿತಗೊಳಿಸುವುದಿಲ್ಲ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.